16 ಬಾರಿ ಸರ್ಜರಿಗೊಳಗಾದರೂ ಛಲ ಬಿಡದ ಛಲಗಾರ
16 ಬಾರಿ ಸರ್ಜರಿಗೊಳಗಾದರೂ ಛಲ ಬಿಡದ ಛಲಗಾರ
February 14, 2019
ಚಳಿಗಾಲ ಮತ್ತು ಫ್ಯಾಶನ್
ಚಳಿಗಾಲ ಮತ್ತು ಫ್ಯಾಶನ್
March 4, 2019
16 ಬಾರಿ ಸರ್ಜರಿಗೊಳಗಾದರೂ ಛಲ ಬಿಡದ ಛಲಗಾರ
16 ಬಾರಿ ಸರ್ಜರಿಗೊಳಗಾದರೂ ಛಲ ಬಿಡದ ಛಲಗಾರ
February 14, 2019
ಚಳಿಗಾಲ ಮತ್ತು ಫ್ಯಾಶನ್
ಚಳಿಗಾಲ ಮತ್ತು ಫ್ಯಾಶನ್
March 4, 2019

Beauty tips- Hair Problems

Beauty tips- Hair Problems

ಚಳಿಗಾಲ ಮತ್ತು ಫ್ಯಾಶನ್ Beauty tips- Hair Problems

ಸೌಂದರ್ಯ ಹೆಚ್ಚಿಸುವಲ್ಲಿ ಆಕರ್ಷಕ ತಲೆ ಕೂದಲು ಬಹುಮುಖ್ಯ ಪಾತ್ರ ವಹಿಸುತ್ತವೆ. ಜೀವನ ಶೈಲಿ ,ಒತ್ತಡದಿಂದಾಗಿ ಕೂದಲಿನಲ್ಲಿ ಸಮಸ್ಯೆಗಳು ಹೆಚ್ಚುತ್ತಲೇ ಇದೆ. ಅದರಲ್ಲೂ ಚಳಿಗಾಲದಲ್ಲಿ ಇನ್ನೂ ಜಾಸ್ತಿ. ಪ್ರತಿಯೊಬ್ಬರೂ ತಮ್ಮ ಕೂದಲು ಆರೋಗ್ಯಕರವಾಗಿರಬೇಕು,ಮೃದುವಾಗಿರಬೇಕು,ಫಳ ಫಳ ಹೊಳೆಯುತ್ತಿರಬೇಕೆಂದು ಬಯಸುತ್ತಾರೆ. ಆದರೆ ವಿಪರೀತವಾಗಿ ಕಾಡುವ ತಲೆಹೊಟ್ಟು,ಕೂದಲು ಉದುರುವಿಕೆ,ಸೀಳಿ ಕೊಳ್ಳುವ ಸಮಸ್ಯೆಯಿಂದಾಗಿ ಅದ್ಯಾವುದೂ ಸಾಧ್ಯವಾಗದೇ ಬೇಸತ್ತು ಹೋಗುತ್ತಾರೆ. ಕೂದಲಿನ ಅಂದ ಹೆಚ್ಚಲೆಂದು ಶ್ಯಾಂಪೂ, ಮಾರ್ಕೆಟಿನಲ್ಲಿ ಸಿಗುವ ವಿವಿಧ ರೀತಿಯ ಎಣ್ಣೆಗೆ ಮಾರು ಹೋಗುವವರಿದ್ದಾರೆ. ಆದರೆ ಇದು ಫಲಿತಾಂಶ ನೀಡುತ್ತದೆ ಎಂಬ ಯಾವ ಗ್ಯಾರಂಟಿಯೂ ಇರುವುದಿಲ್ಲ. ಒಂದು ಶ್ಯಾಂಪೂ ಬಳಸಿದ ಮೇಲೆ ಅದರಿಂದ ಯಾವುದೇ ಫಲಿತಾಂಶ ಬಂದಿಲ್ಲವೆಂದು ತಿಂಗಳುಗಳು ಕಳೆದ ಮೇಲೆ ಮತ್ತೊಂದು ಕಂಪನಿ ಶ್ಯಾಂಪೂಗೆ ಮರುಳಾಗಿ ಬಿಡುತ್ತಾರೆ. ಹೀಗೆ ಶ್ಯಾಂಪೂಗಳ ನಿರಂತರ ಬಳಕೆ ಹಾಗೂ ಅವುಗಳ ಬದಲಾವಣೆಯಿಂದಾಗಿಯೂ ಕೂದಲಿನ ಮೇಲೆ ಅಡ್ಡ ಪರಿಣಾಮಗಳು ಬೀರುತ್ತವೆ.

ಕೂದಲಿನ ಅಂದ ಕಳೆಗುಂದಲು ಕಾರಣಗಳು

– ಮೊದಲನೆಯದಾಗಿ ಶುಚಿಯನ್ನು ಕಾಪಾಡಿಕೊಳ್ಳಬೇಕು. ಹೊರಗಡೆ ಹೋಗಿ ಬಂದಾಗ ಕೂದಲು ತುಂಬಾ ಧೂಳಾಗಿರುವುದರಿಂದ ಕೂದಲ ಉದುರುವಿಕೆ,ನಿರ್ಜೀವ ಕಳೆ ಕೂದಲಿಗೆ ಬರುತ್ತದೆ.

– ಕೆಲಸದ ಒತ್ತಡ, ಚಿಂತೆ, ಮಾನಸಿಕ ನೆಮ್ಮದಿ ಇಲ್ಲದಿದ್ದರೂ ತಲೆ ಕೂದಲು ಉದುರಲು ಕಾರಣವಾಗುತ್ತದೆ. ಆದ್ದರಿಂದ ವಿಪರೀತ ಚಿಂತೆ ಮಾಡುವುದು ಒಳ್ಳೆಯದಲ್ಲ. ದಿನವನ್ನು ನಗು ನಗುತ್ತಾ ಖುಷಿಯಿಂದ ಕಳೆಯಿರಿ. ಸಮಯವನ್ನು ಸಂತೋಷದಿಂದ ಕಳೆದರೆ ಆರೋಗ್ಯಕ್ಕೂ ಒಳ್ಳೆಯದು ಜತೆಗೆ ಒತ್ತಡವೂ ಆಗಲಾರದು.

– ಕೆಲಸಕ್ಕೆ ಹೋಗುವ ಮಹಿಳೆಯರಾಗಲಿ,ಪುರುಷರಾಗಲಿ ಆಪೀಸ್ ಗೆ ತಡವಾಯಿತೆಂದು ಸ್ನಾನ ಮಾಡಿ ಒದ್ದೆ ಕೂದಲನ್ನೇ ಬಾಚುತ್ತಾರೆ. ಇದರಿಂದಾಗಿಯೂ ಕೂದಲು ಉದುರುವ ಸಮಸ್ಯೆ ತಲೆದೋರುತ್ತದೆ. ತಲೆಹೊಟ್ಟು ಮತ್ತು ನಿರ್ಜೀವ ಕೂದಲಿನ ಸಮಸ್ಯೆ ಎದುರಾಗುವ ಸಂಭನೀಯತೆ ಹೆಚ್ಚು.

– ಈಗಾಗ್ಲೇ ತಿಳಿಸಿದ ಹಾಗೆ ಹೊರಗಡೆ ಹೋಗಿ ಬಂದಾಗ ರಸ್ತೆಗಳಲ್ಲಿರುವ ಧೂಳು ನಿಮಗರಿವಿಲ್ಲದಂತೆಯೇ ನಿಮ್ಮ ತಲೆಕೂದಲನ್ನು ಆವರಿಸಿ ಬಿಡುತ್ತದೆ. ಅದಕ್ಕಾಗಿ ನೀವು ಜಾಗರೂಕರಾಗಿರಬೇಕು. ಬೆವರು, ಒದ್ದೆ ಕೂದಲು ಇದ್ದರೆ ಹಾಗೆಯೇ ಒಂದು ಸಲ ನೀರಿನಲ್ಲಿ ತೊಳೆದು ಬಿಡಿ. ಒಣಗಿದ ನಂತರ ಎಣ್ಣೆ ಅಥವಾ ತಲೆಕೂದಲಿಗೆ ಬೇಕಾದ ಮೆಡಿಸಿನ್ ಹಚ್ಚಿ. ಇಲ್ಲದೇ ಹೋದಲ್ಲಿ ಕೂದಲು ಹೊಳಪು ಕಳೆದು ಕೊಳ್ಳುವುದಲ್ಲದೇ ಕ್ರಮೇಣ ಉದುರಲು ಆರಂಭವಾಗುತ್ತದೆ.

– ಪದೇ ಪದೇ ಶ್ಯಾಂಪು ಗಳ ಬಳಕೆ ಹಾಗೂ ಎಣ್ಣೆ ಹಚ್ಚಿ ತಲೆಗೆ ಸ್ನಾನ ಮಾಡುವುದರಿಂದಲೂ ಕೂದಲಿಗೆ ಸಮಸ್ಯೆಗಳಾಗುತ್ತವೆ. ಇದರಿಂದ ರಾಸಾಯಿನಿಕ ತ್ಯಾಜ್ಯಗಳು,ಜಿಡ್ಡಿನಂಶ ತಲೆಯಲ್ಲಿ ಸಂಗ್ರಹವಾಗುತ್ತವೆ. ಇದು ತಲೆಯ ಚರ್ಮ ಮತ್ತು ಕೂದಲನ್ನು ಒಣಗುವಂತೆ ಮಾಡುವುದಲ್ಲದೇ ಕೂದಲ ಅಂದವನ್ನೇ ಕೆಡಿಸಿ ಬಿಡುವಂತೆ ಮಾಡುತ್ತದೆ.

– ಕೂದಲನ್ನು ಒಣಗಿಸುವಾಗಲೂ ಎಚ್ಚರಿಕೆಯಿಂದಿರಬೇಕು, ಫ್ಯಾನ್ ನಡಿಯಲ್ಲಿ ಅಥವಾ ಸೂರ್ಯನ ಬಿಸಿಲಿಗೆ ಕೂದಲೊಡ್ಡುವುದರ ಬದಲು ಗಾಳಿಯಲ್ಲೇ ಆರುವಂತೆ ನೋಡಿಕೊಳ್ಳಿ . ಅತಿಯಾದ ಬಿಸಿಲಲ್ಲಿ ಕೂದಲು ಒಣಗಿವುದು ಕೂಡ ಕೂದಲಿಗೆ ಪರಿಣಾಮ ಬೀರ ಬಹುದು.

ತಲೆ ಹೊಟ್ಟು ಸಮಸ್ಯೆ

ಇದು ಚಳಿಗಾಲದ ಸಮಯ. ಈ ವೇಳೆ ಕಾಡುವಂತಹ ಬಹುದೊಡ್ಡ್ಡ ಸಮಸ್ಯೆಗಳಲ್ಲಿ ತಲೆ ಹೊಟ್ಟು ಕೂಡ ಒಂದು.
ತಲೆಹೊಟ್ಟು ಬಹುತೇಕರನ್ನು ಕಾಡುವ ಸಮಸ್ಯೆ. ಇದನ್ನು ನಿವಾರಿಸಿಕೊಳ್ಳುವುದಕ್ಕಾಗಿ ಯಾವುದ್ಯಾವುದೋ ರಾಸಾಯನಿಕ ಶ್ಯಾಂಪೂ ಎಣ್ಣೆಗಳನ್ನು ಬಳಸಿ ಸೋತು ಹೋಗುತ್ತಾರೆ. ಆದರೆ ಇದ್ಯಾವುದು ಪ್ರಯೋಜನಕ್ಕೆ ಬಾರದೇ ಸಮಸ್ಯೆ ಮೇಲೆ ಇನ್ನೊಂದು ಸಮಸ್ಯೆ ಹುಟ್ಟಿಕೊಳ್ಳುತ್ತದೆ. ತಲೆಹೊಟ್ಟಿನಲ್ಲಿಯೂ ಸಾಕಷ್ಟು ವಿಧಗಳಿವೆ. ಪ್ರತಿಯೊಂದು ರೀತಿಯ ತಲೆಹೊಟ್ಟಿಗೂ ಕೂಡ ಬೇರೆಬೇರೆ ಕಾರಣಗಳಿವೆ. ಆದರೆ ಅದು ತಲೆ ಕೂದಲನ್ನು ಪ್ರವೇಶಿಸಿ ಬಿಟ್ಟರೆ ಹೋಗಲಾಡಿಸುವುದು ಸುಲಭದ ವಿಷಯವಲ್ಲ. ಆದರೂ ಚಿಂತಿಸುವ ಅಗತ್ಯವಿಲ್ಲ. ತಲೆ ಹೊಟ್ಟು ನಿವಾರಣೆಗೆ ಸರಳ ಉಪಾಯಗಳು ಇಲ್ಲಿವೆ.

– ಉಗುರು ಬೆಚ್ಚಗಿನ ಎಣ್ಣೆ ತಲೆ ಹೊಟ್ಟು ನಿವಾರಣೆಗೆ ಅತ್ಯಂತ ಸರಳ ಉಪಾಯಗಳಲ್ಲಿ ಒಂದು. ಯಾವಾಗಲೂ ತಲೆಗೆ ಬಿಸಿ ಮಾಡಿದ ಎಣ್ಣೆಯನ್ನೇ ತಲೆಗೆ ಹಚ್ಚಿ ಕೊಳ್ಳಲು ರೂಢಿ ಮಾಡಿಕೊಂಡರೆ ಒಳಿತು. ಆಲೀವ್ ಆಯಿಲ್, ತೆಂಗಿನೆಣ್ಣೆ , ಬಾದಾಮಿ ಎಣ್ಣೆ , ಹರಳೆಣ್ಣೆ, ಸಾಸಿವೆ ಎಣ್ಣೆ ಮುಂತಾದ ಎಣ್ಣೆಯಿಂದ ಮಸಾಜ್ ಮಾಡಿದರೆ ತಲೆಹೊಟ್ಟು ನಿವಾರಣೆಗೆ ತುಂಬಾ ಒಳ್ಳೆಯದು.

– ವಾರಕ್ಕೊಮ್ಮೆಯಾದರೂ ಚೆನ್ನಾಗಿ ಮಿಶ್ರಣ ಮಾಡಿದ ಹಸಿಮೊಟ್ಟೆಯ ಬಿಳಿ ಭಾಗವನ್ನು ತಲೆಗೆ ಹಚ್ಚಿಕೊಂಡು ಒಂದು ಗಂಟೆ ಬಳಿಕ ಕೂದಲು ತೊಳೆದು ಕೊಳ್ಳ ಬೇಕು.

– ಮೆಂತ್ಯೆ ಸೊಪ್ಪನ್ನು ಅರೆದು ಪೇಸ್ಟ್ ತಯಾರಿಸಿ ತಲೆಗೆ ಹಚ್ಚಿಕೊಂಡು 15 ನಿಮಿಷ ನಂತರ ತೊಳೆದು ಕೊಳ್ಳಿ. ಅಥವಾ ಮೆಂತ್ಯೆ ಕಾಳನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ನೀರನ್ನು ತೆಗೆದು ಪೇಸ್ಟ್ ತಯಾರಿಸಿ ಕೊಳ್ಳಿ. ಕೂದಲಿಗೆ ಹಚ್ಚಿ. ಇಪ್ಪತ್ತು ನಿಮಿಷ ಬಿಟ್ಟು ಸ್ನಾನ ಮಾಡಿ.

– ಮೊಸರನ್ನು ತಿಂಗಳಿಗೊಮ್ಮೆಯಾದರೂ ತಲೆಗೆ ಹಚ್ಚುವುದನ್ನು ರೂಢಿ ಮಾಡಿ ಕೊಳ್ಳಿ.

– ಹಿಂದೆ ತಲೆ ಸ್ನಾನ ಮಾಡಲು ಸೀಗೆ ಕಾಯಿಯನ್ನು ಬಳಸುತ್ತಿದ್ದರು. ನಿಮಗೆ ಸೀಗೆ ಕಾಯಿ ಪುಡಿ ಸಿಕ್ಕರೆ ಅದನ್ನು ಬಳಸುವುದರಿಂದ ಉತ್ತಮ ಫಲಿತಾಂಶ ನಿಮ್ಮದಾಗುವುದು.

– ಬೇವಿನ ಎಣ್ಣೆ ಅಥವಾ ಎಲೆಗಳನ್ನು ಅರೆದು ತಲೆಗೆ ಹಚ್ಚಿಕೊಂಡರೆ ನಿಮ್ಮನ್ನು ಕಾಡುವ ತಲೆಹೊಟ್ಟು ದೂರವಾಗುತ್ತದೆ.

– ಈರುಳ್ಳಿಯಿಂದ ತಲೆ ಹೊಟ್ಟು ,ಕೂದಲು ಉದುರುವುದು ಎಲ್ಲಾ ನಿಲ್ಲುತ್ತದೆ. ಈರುಳ್ಳಿನ ಮಿಕ್ಸಿಲಿ ಪೇಸ್ಟ್ ಮಾಡಿ, ಅದರಿಂದ ರಸ ತೆಗೆಯಿರಿ. ಹರಳೆಣ್ಣೆ ಮಿಕ್ಸ್ ಮಾಡಿ 30-45 ನಿಮಿಷ ಆದ ಮೇಲೆ ಸ್ನಾನ ಮಾಡಿ. ವಾರದಲ್ಲಿ ಎರಡು ಬಾರಿ ಹೀಗೆ ಮಾಡುತ್ತಾ ಬನ್ನಿ.

ಇಂದಿನ ವೇಗದ ಜೀವನದಲ್ಲಿ ಸೌಂದರ್ಯ ಕಡೆ ಗಮನ ಕೊಡುವುದಕ್ಕೂ ಸಮಯ ಸಾಕಾಗುವುದಿಲ್ಲ. ಸೌಂದರ್ಯ ಬಗ್ಗೆ ಕಾಳಜಿ ಇರುವವರು ಒಂದು ಸಲ ಕೂದಲ ಸೌಂದರ್ಯಕ್ಕು ಮಹತ್ವ ನೀಡಿ . ತಲೆ ಕೂದಲು ನಿಮ್ಮ ಸೌಂದರ್ಯವನ್ನೇ ಇಮ್ಮಡಿಗೊಳಿಸುತ್ತದೆ ಅನ್ನುವುದನ್ನು ಮರೆಯಬೇಡಿ. ಶುಚಿತ್ವಕ್ಕೆ ಪ್ರಾಮುಖ್ಯತೆ ನೀಡುತ್ತಾರೆ. ಮಾಡಿದರೆ ನಾವು ಆರೋಗ್ಯವಾಗಿರಬಹುದು. ತಲೆ ಕೂದಲ ಸೌಂದರ್ಯ.