ವಿಶ್ವವನ್ನೇ ಬೆರಗುಗೊಳಿಸಿದ ಮಂಡ್ಯದ ಹುಡುಗ ಡ್ರೋನ್ ಯಂತ್ರ ಸೃಷ್ಟಿಸಿದ ಯುವ ವಿಜ್ಞಾನಿ ಪ್ರತಾಪ್ ರೈತನ ಮಗನೊಬ್ಬನ ಅಂತರಾಷ್ಟ್ರೀಯ ಮಟ್ಟದ ಸಾಧನೆ
ವಿಶ್ವವನ್ನೇ ಬೆರಗುಗೊಳಿಸಿದ ಮಂಡ್ಯದ ಹುಡುಗ ಡ್ರೋನ್ ಯಂತ್ರ ಸೃಷ್ಟಿಸಿದ ಯುವ ವಿಜ್ಞಾನಿ ಪ್ರತಾಪ್ ರೈತನ ಮಗನೊಬ್ಬನ ಅಂತರಾಷ್ಟ್ರೀಯ ಮಟ್ಟದ ಸಾಧನೆ
January 25, 2019
ಮಾಯಾಂಕ್ ಎಂಬ ಬ್ಯಾಟಿಂಗ್ ಮುತ್ತು
ಮಾಯಾಂಕ್ ಎಂಬ ಬ್ಯಾಟಿಂಗ್ ಮುತ್ತು
January 29, 2019
ವಿಶ್ವವನ್ನೇ ಬೆರಗುಗೊಳಿಸಿದ ಮಂಡ್ಯದ ಹುಡುಗ ಡ್ರೋನ್ ಯಂತ್ರ ಸೃಷ್ಟಿಸಿದ ಯುವ ವಿಜ್ಞಾನಿ ಪ್ರತಾಪ್ ರೈತನ ಮಗನೊಬ್ಬನ ಅಂತರಾಷ್ಟ್ರೀಯ ಮಟ್ಟದ ಸಾಧನೆ
ವಿಶ್ವವನ್ನೇ ಬೆರಗುಗೊಳಿಸಿದ ಮಂಡ್ಯದ ಹುಡುಗ ಡ್ರೋನ್ ಯಂತ್ರ ಸೃಷ್ಟಿಸಿದ ಯುವ ವಿಜ್ಞಾನಿ ಪ್ರತಾಪ್ ರೈತನ ಮಗನೊಬ್ಬನ ಅಂತರಾಷ್ಟ್ರೀಯ ಮಟ್ಟದ ಸಾಧನೆ
January 25, 2019
ಮಾಯಾಂಕ್ ಎಂಬ ಬ್ಯಾಟಿಂಗ್ ಮುತ್ತು
ಮಾಯಾಂಕ್ ಎಂಬ ಬ್ಯಾಟಿಂಗ್ ಮುತ್ತು
January 29, 2019

ಶಾರುಖ್ ರನ್ನು ನಡುಗಿಸಿತೆ ಕೆಜಿಎಫ್? – ಈಗ ರಾಕಿಂಗ್ ಸ್ಟಾರ್ ಯಶ್ ಹವಾ…

ಶಾರುಖ್ ರನ್ನು ನಡುಗಿಸಿತೆ ಕೆಜಿಎಫ್? - ಈಗ ರಾಕಿಂಗ್ ಸ್ಟಾರ್ ಯಶ್ ಹವಾ...

Image from post regarding ಶಾರುಖ್ ರನ್ನು ನಡುಗಿಸಿತೆ ಕೆಜಿಎಫ್? - ಈಗ ರಾಕಿಂಗ್ ಸ್ಟಾರ್ ಯಶ್ ಹವಾ...

ಈಗ ಎಲ್ಲೆಲ್ಲೂ ಕೆಜಿಎಫ್ ಸಿನಿಮಾದ್ದೇ ಹವಾ. ನಟ ರಾಕಿಂಗ್ ಸ್ಟಾರ್ ಯಶ್ ಬಹು ನಿರೀಕ್ಷೆಯ ಸಿನಿಮಾ ಕೆಜಿಎಫ್. ರಾಜಾಹುಲಿ, ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ , ಕಿರಾತಕ ದಂತಹ ಸೂಪರ್ ಹಿಟ್ ಸಿನಿಮಾ ಕೊಟ್ಟ ಯಶ್ ಗೆ ಕೆಜಿಎಫ್ ಈಗ ಹೊಸ ಇಮೇಜ್ ಅನ್ನೇ ತಂದುಕೊಟ್ಟಿದೆ. ಇದಕ್ಕೆ ಸಾಕ್ಷ್ಯಿ ಕೆಜಿಎಫ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಕೋಟ್ಯಂತರ ರೂ.ಗಳಿಸಿಕೊಂಡಿದೆ. ಬಾಲಿವುಡ್ ಬಾದ್ ಷಾ ಎಂದೇ ಕರೆಯಲ್ಪಡುವ ಶಾರುಖ್ ಖಾನ್ ನಟನೆಯ ಸಿನಿಮಾ ಝೀರೊವನ್ನೇ ಹಿಂದಿಕ್ಕಿ ಯಶ್ ನಾಗಾಲೋಟ ನಡೆಸಿರುವುದು ವಿಶೇಷ.

ಪಂಚ ಭಾಷೆಯ ಸಿನಿಮಾ:

ಕನ್ನಡ, ಹಿಂದಿ, ತಮಿಳ್, ತೆಲುಗು ಹಾಗೂ ಮಲೆಯಾಳ ಭಾಷೆಯಲ್ಲಿ ಬಿಡುಗಡೆ ಹೊಂದಿರುವ ಸಿನಿಮಾದ ಬಗ್ಗೆ ಹೆಚ್ಚಿನವರು ಸೂಪರ್ ಎಂದಿದ್ದಾರೆ. ಕೆಲವರು ಓಕೆ ಎಂದಿದ್ದಾರೆ. ಇನ್ನೂ ಕೆಲವರು ಚೆನ್ನಾಗಿಲ್ಲ ಎನ್ನುವ ಪ್ರತಿಕ್ರಿಯೆಯನ್ನೂ ಕೊಟ್ಟಿದ್ದಾರೆ. ಟ್ವೀಟರ್ ,ಫೇಸ್ ಬುಕ್, ಇನ್ಸ್ಟಾಗ್ರಾಮ್ ನಲ್ಲಿ ಕೆಜಿಎಫ್ ಬಗ್ಗೆಯೇ ಚರ್ಚೆ. ಅಷ್ಟೇಕೆ ಇಡೀ ಭಾರತೀಯ ಚಿತ್ರರಂಗದಲ್ಲಿ ಕನ್ನಡ ಸಿನಿಮಾ ಮೇಕಿಂಗ್ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ.
ಸದ್ಯ ಕೆಜಿಎಫ್ ಸಿನಿಮಾಗೆ ಎಲ್ಲ ಭಾಷಿಗರಿಂದಲೂ ಉತ್ತಮ ಪ್ರತಿಕ್ರಿಯೆ ಬಂದಿದೆ, ಅದರಲ್ಲೂ ಬಾಲಿವುಡ್ ನ ತವರು ಎಂದು ಕರೆಯಿಸಿಕೊಳ್ಳುವ ವಾಣಿಜ್ಯ ನಗರಿ ಮುಂಬಯಿ ನಲ್ಲಿ ಶಾರುಖ್ ರ ಝೀರೋ ಸಿನಿಮಾವನ್ನು ಮೀರಿ ಕೆಜಿಎಫ್ ದಾಖಲೆಯ ಕಲೆಕ್ಷನ್ ಕಂಡಿದೆ. ಕೇವಲ ನಾಲ್ಕು ದಿನದಲ್ಲಿ ಕೆಜಿಎಫ್ ಒಟ್ಟು 70 ಕೋಟಿ ರೂ.ಬಾಚಿಕೊಂಡಿದೆ ಎನ್ನುತ್ತವೆ ಮೂಲಗಳು.

ಬಿಸಿ ದೋಸೆಯಂತೆ ಟಿಕೇಟ್ ಮಾರಾಟ:

ಪರಭಾಷೆಯ ಸಿನಿಮಾಗಳನ್ನೆ ಹೆಚ್ಚಾಗಿ ಓಡಿಸುತ್ತಿದ್ದ ಚಿತ್ರಮಂದಿರಗಳು ಕೆಜಿಎಫ್ ಬಿಡುಗಡೆಯ ಬಳಿಕ ಬದಲಾದಂತಿವೆ. ಕನ್ನಡ ಸಿನಿಮಾದ ಇತಿಹಾಸದಲ್ಲಿ ಮೊದಲ ಸಲ ಎನ್ನುವಂತೆ ಎಲ್ಲ ಚಿತ್ರಮಂದಿರಗಳಲ್ಲೂ ಕೆಜಿಎಫ್ ದರ್ಬಾರ್ ನಡೆಸುತ್ತಿದೆ. ಎಲ್ಲ ಟಿಕೇಟ್ ಸೋಲ್ಡ್ ಔಟ್ ಆಗಿದೆ ಎನ್ನುವಂತಹ ಪ್ರಕಟಣೆಯನ್ನು ಚಿತ್ರಮಂದಿರದ ಎದುರು ಕಾಣಬಹುದಾಗಿದೆ. ನೆರೆಯ ತಮಿಳುನಾಡಿನಲ್ಲೇ ಥೀಯೆಟರ್ ಸಂಖ್ಯೆಯನ್ನು 100ರಿಂದ 300ಕ್ಕೆ ಹೆಚ್ಚಿಸಲಾಗಿತ್ತು. ಒಟ್ಟಿನಲ್ಲಿ ಎಲ್ಲ ಕಡೆಯಲ್ಲೂ ಕೆಜಿಎಫ್ ಅಬ್ಬರಿಸಿದೆ. ದಾಖಲೆಗಳನ್ನು ಧೂಳೀಪಟ ಮಾಡಿ ಮುನ್ನುಗ್ಗುತ್ತಿದೆ.

ಬಾಲಿವುಡ್ ನಟರಿಗೆ ಉಗಿದ ಪ್ರೇಕ್ಷಕ:

ರಾಕಿಂಗ್ ಸ್ಟಾರ್ ಯಶ್ ಸಿನಿಮಾ ನೋಡಿದ ಬಳಿಕ ಪರಭಾಷಾ ಪ್ರೇಕ್ಷಕನೊಬ್ಬ ಬಾಲಿವುಡ್ ಮಂದಿಗೆ ಹಿಗ್ಗಾಮುಗ್ಗ ಉಗಿದಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಆತ ಹೇಳಿರುವುದು ಇಷ್ಟೇ ‘ಚಿತ್ರಕ್ಕೆ ಸಂಗೀತ ನೀಡುವುದು ಹೇಗೆ ಎಂದು ಕನ್ನಡಿಗರನ್ನು ನೋಡಿ ಕಲಿಯಿರಿ. ಕೆಜಿಎಫ್ ಚಿತ್ರದ ಹಿನ್ನಲೆ ಸಂಗೀತ ಕೇಳಿ ನನ್ನ ನರನಾಡಿಗಳೆಲ್ಲ ಪುಳಕಿತಗೊಂಡಿದೆ. ಬಾಲಿವುಡ್ ನವರು ನೀವು ಇದ್ದೀರಾ, ಚಿಕ್ಕ ಮಕ್ಕಳು ಪಿಯಾನೋ ಬಾರಿಸುವಂತೆ ಸಂಗೀತ ನೀಡುತ್ತಿರಾ ಎಂದು ಹಾಸ್ಯ ಮಾಡಿದ್ದಾನೆ.

ನಿರ್ಮಾಪಕ ಫುಲ್ ಖುಷ್:

ಚಿತ್ರದ ಬಿಡುಗಡೆಯ ಆರಂಭದಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಕೆಲವರು ಸಿನಿಮಾ ಬಿಡುಗಡೆಗೆ ಅಡ್ಡಿ ಪಡಿಸಲು ಯತ್ನಿಸಿದ್ದರು. ಕೊನೆಗೂ ನಿಗದಿಯಂತೆ ಸಿನಿಮಾ ಬಿಡುಗಡೆ ಮಾಡಲಾಯಿತು. ಈ ಬಗ್ಗೆ ಸಿನಿಮಾ ನಿರ್ಮಾಪಕ ವಿಜಯ್ ಕಿರಗಂದೂರು ಫುಲ್ ಖುಷ್ ಆಗಿದ್ದಾರೆ, ಮಾಧ್ಯಮಕ್ಕೆ ಮಾತನಾಡಿರುವ ಅವರು ಚಿತ್ರ ಬಿಡುಗಡೆಯಾದ ಮೊದಲ ದಿನ 24 ಕೋಟಿ ರೂ. ಗಳಿಕೆ ಮಾಡಿದೆ. ಎರಡು ಹಾಗೂ ಮೂರನೇ ದಿನ 20-21 ಕೋಟಿ ರೂ. ಗಳಿಸಿದೆ. ಅಂದಾಜು ಮೂರು ದಿನಗಳಲ್ಲಿ 60 ಕೋಟಿ ರೂ. ದಾಟಿದೆ. ಹಿಂದಿ ಸೇರಿದಂತೆ ಪರಭಾಷೆಗಳಲ್ಲಿ ದಿನದಿಂದ ದಿನಕ್ಕೆ ಗಳಿಕೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು. ಝೀರೋ ಒಟ್ಟಾರೆಗಳಿಕೆ 38 ಕೋಟಿ ರೂ. ಎನ್ನುವುದು ಸಿನಿಮಾ ಪಂಡಿತರ ಲೆಕ್ಕಾಚಾರ.

ವಿದೇಶದಲ್ಲೂ ಭಾರೀ ಯಶಸ್ಸು:

ಡಿಸೆಂಬರ್ 20ರಂದೇ ಕೆಜಿಎಫ್ ವಿದೇಶಗಳಲ್ಲಿ ಬಿಡುಗಡೆಯಾಗಿತ್ತು. ಡಿ.21ರಂದು ಕೆಜಿಎಫ್ ಭಾರತದಾದ್ಯಂತ ಬಿಡುಗಡೆಯಾಗಿದೆ. ಇದೀಗ ಅಲ್ಲೂ ಯಶಸ್ವಿಯಾಗಿ ಓಡುತ್ತಿದೆ ಎನ್ನುತ್ತವೆ ಮೂಲಗಳು.

ಪ್ರಶಾಂತ್ ನೀಲ್ ನಿರ್ದೇಶಕ:

ಸಿನಿಮಾಗೆ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿದ್ದಾರೆ. ಕರಾವಳಿ ಹುಡುಗಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಹೊಂಬಾಳೆ ಫೀಲ್ಮ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣಗೊಂಡಿದೆ.

ಕೆಜಿಎಫ್ ನೋಡಿ ರಶ್ಮಿಕಾ ಜಂಪ್!:

ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸಿನಿಮಾ ಲೋಕಕ್ಕೆ ಕಾಲಿರಿಸಿ ಇದೀಗ ದಕ್ಷಿಣ ಭಾರತದ ಬಹು ಬೇಡಿಕೆಯ ನಟಿಯಾಗಿರುವ ಕನ್ನಡತಿ ರಶ್ನಿಕಾ ಮಂಧಣ್ಣ ಕೆಜಿಎಫ್ ನೋಡಿ ಫಿದಾ ಆಗಿದ್ದಾರೆ. ಯಶ್ ನಟನೆ ನೋಡಿ ಸಿನಿಮಾ ಮಂದಿರದಲ್ಲೇ ಕುಳಿತಲ್ಲೇ ಜಂಪ್ ಮಾಡಿದ್ದಸರಂತೆ. ಸ್ವತಃ ಇದನ್ನು ರಶ್ಮಿಕಾ ಟ್ವೀಟರ್ ನಲ್ಲಿ ತಿಳಿಸಿದ್ದಾರೆ.

ಒಟ್ಟಿನಲ್ಲಿ ರಾಕಿಂಗ್ ಸ್ಟಾರ್ ಈಗ ವಿಶ್ವ ಮಟ್ಟದಲ್ಲಿ ಸುದ್ದಿಯಾಗಿರುವುದು ಕನ್ನಡಿಗರು ಹೆಮ್ಮೆ ಪಡುವ ಸಂಗತಿ. ಕನ್ನಡ ಸಿನಿಮಾಗಳು ಎಂದರೆ ಮೂಗು ಮುರಿಯುತ್ತಿದ್ದವರಿಗೆ, ಪರಭಾಷೆಯ ಸಿನಿಮಾಗಳನ್ನೇ ಸದಾ ಹೊಗಳಿಕೊಂಡು ಕನ್ನಡ ಸಿನಿಮಾವನ್ನು ಜರೆಯುತ್ತಿದ್ದವರಿಗೆ ಈಗ ಯಶ್ ಉತ್ತರ ನೀಡಿದ್ದಾರೆ, ಇತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದರೆ ಸಿನಿಮಾ ಶೀಘ್ರದಲ್ಲೇ ಶತದಿನವನ್ನು ದಾಟುವುದರಲ್ಲಿ ಯಾವುದೇ ಅನುಮಾನ ಇಲ್ಲ.