ಶಾರುಖ್ ರನ್ನು ನಡುಗಿಸಿತೆ ಕೆಜಿಎಫ್? - ಈಗ ರಾಕಿಂಗ್ ಸ್ಟಾರ್ ಯಶ್ ಹವಾ...
ಶಾರುಖ್ ರನ್ನು ನಡುಗಿಸಿತೆ ಕೆಜಿಎಫ್? – ಈಗ ರಾಕಿಂಗ್ ಸ್ಟಾರ್ ಯಶ್ ಹವಾ…
January 27, 2019
ಭವ್ಯ ಭವಿಷ್ಯದ ಕನಸಿನಲ್ಲಿ ದೇವದತ್ತ ಪಡಿಕಲ್
ಭವ್ಯ ಭವಿಷ್ಯದ ಕನಸಿನಲ್ಲಿ ದೇವದತ್ತ ಪಡಿಕಲ್
January 31, 2019
ಶಾರುಖ್ ರನ್ನು ನಡುಗಿಸಿತೆ ಕೆಜಿಎಫ್? - ಈಗ ರಾಕಿಂಗ್ ಸ್ಟಾರ್ ಯಶ್ ಹವಾ...
ಶಾರುಖ್ ರನ್ನು ನಡುಗಿಸಿತೆ ಕೆಜಿಎಫ್? – ಈಗ ರಾಕಿಂಗ್ ಸ್ಟಾರ್ ಯಶ್ ಹವಾ…
January 27, 2019
ಭವ್ಯ ಭವಿಷ್ಯದ ಕನಸಿನಲ್ಲಿ ದೇವದತ್ತ ಪಡಿಕಲ್
ಭವ್ಯ ಭವಿಷ್ಯದ ಕನಸಿನಲ್ಲಿ ದೇವದತ್ತ ಪಡಿಕಲ್
January 31, 2019

ಮಾಯಾಂಕ್ ಎಂಬ ಬ್ಯಾಟಿಂಗ್ ಮುತ್ತು

ಮಾಯಾಂಕ್ ಎಂಬ ಬ್ಯಾಟಿಂಗ್ ಮುತ್ತು

Image from post regarding ಮಾಯಾಂಕ್ ಎಂಬ ಬ್ಯಾಟಿಂಗ್ ಮುತ್ತು

– ಕಾಂಗರೂ ನೆಲದಲ್ಲಿ ಬೆಂಗಳೂರು ಹುಡುಗನ ಕಮಾಲ್
– ಪಾಲ್ಗೊಂಡ ಮೊದಲ ಟೆಸ್ಟ್ ನಲ್ಲೇ ಗಮನ ಸೆಳೆದ ಕನ್ನಡಿಗ

ಟೆಸ್ಟ್ ಕ್ರಿಕೆಟ್ ಗೆ ಆಸ್ಟ್ರೇಲಿಯದಲ್ಲಿ ಪದಾರ್ಪಣೆ ಮಾಡಿರುವ ಕನ್ನಡಿಗ ಮಾಯಾಂಕ್ ಅಗರ್ವಾಲ್ ಮೊದಲ ಪ್ರಯತ್ನದಲ್ಲೇ ಯಶ ಕಂಡಿದ್ದಾರೆ. ಎರಡೂ ಇನಿಂಗ್ಸ್ ಗಳಲ್ಲೂ ದಿಟ್ಟವಾಗಿ ಬ್ಯಾಟ್ ಬೀಸಿರುವ ಮಾಯಾಂಕ್ ಟೀಂ ಇಂಡಿಯಾದ ಭವಿಷ್ಯದ ಆರಂಭಿಕನಾಗಿ ಭದ್ರವಾಗಿ ನೆಲೆ ನಿಲ್ಲುವ ಸೂಚನೆ ನೀಡುತ್ತಿದ್ದಾರೆ. ಇದು ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ಸಂಗತಿಯೇ ಸರಿ. ಕಿರಿಯರ ಕ್ರಿಕೆಟ್ ನಿಂದ ರಣಜಿ ಕ್ರಿಕೆಟ್ ತನಕ ಸಾಗಿ ಬಂದು ಇದೀಗ ಭಾರತೀಯ ತಂಡ ಸೇರಿಕೊಂಡಿರುವ ಮಾಯಾಂಕ್ ಅಗರ್ವಾಲ್ ಸಾಧನೆಗೆ ಉಘೇ ಎನ್ನಲೇಬೇಕು.

ಕೆ.ಎಲ್.ರಾಹುಲ್-ಮುರಳಿ ವಿಜಯ್ ಆರಂಭಿಕರಾಗಿ ಮೊದಲ ಎರಡು ಟೆಸ್ಟ್ ಗಳಲ್ಲಿ ಕಾಂಗರೂಗಳ ಎದುರು ಅಷ್ಟೊಂದು ಉತ್ತಮ ನಿರ್ವಹಣೆ ನೀಡಲಿಲ್ಲ. ಇದು ತಂಡದ ಮೇಲೆ ಸಹಜವಾಗಿಯೇ ಒತ್ತಡ ತಂದಿತು. 2ನೇ ಟೆಸ್ಟ್ ನಲ್ಲಿ ತಂಡ ಸೋಲಲು ಇದು ಒಂದು ಕಾರಣವೂ ಆಯಿತು. ಇದರಿಂದ ಸೂಕ್ತ ಆರಂಭಿಕರು ತಂಡಕ್ಕೆ ಬೇಕು ಎನ್ನುವ ಒತ್ತಡ ಹೆಚ್ಚಾಯಿತು. ಈ ವೇಳೆ ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಯಾವ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎನ್ನುವ ಚರ್ಚೆ ನಡೆಸಿತು. ತಕ್ಷಣ ಕರೆ ಬಂದದ್ದು ರಾಜ್ಯದ ಪ್ರತಿಭಾವಂತ ಬ್ಯಾಟ್ಸ್ ಮನ್ ಮಾಯಾಂಕ್ ಅಗರ್ವಾಲ್ ಗೆ. ಟೆಸ್ಟ್ ತಂಡಕ್ಕೆ ಈಗಾಗಲೇ ಆಯ್ಕೆಯಾಗಿ ಕೆಲ ಪಂದ್ಯ ಆಡಬೇಕಿದ್ದ ಮಾಯಾಂಕ್ ಕೆಲವೊಂದು ಅಡಚಣೆಗಳಿಂದ ತಂಡದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಈ ಸಲ ಅವಕಾಶ ತಪ್ಪಿಸಲು ಯಾರಿಗೂ ಸಾಧ್ಯವಾಗಲಿಲ್ಲ. ಮಾಯಾಂಕ್ ಆಡಿಯೇ ಬಿಟ್ಟರು. ಮೊದಲ ಇನಿಂಗ್ಸ್ ನಲ್ಲಿ 76 ರನ್ ಸಿಡಿಸಿ ಗಮನ ಸೆಳೆದರು. ಎರಡನೇ ಇನಿಂಗ್ಸ್ ನಲ್ಲಿ 42 ರನ್ ಬಾರಿಸಿ ತಂಡದ ಗುರಿಯನ್ನು ಹೆಚ್ಚಿಸಲು ನೆರವಾಗಿದ್ದರು. ಇವರ ಸಾಹಸದ ನೆರವಿನಿಂದ ಆಸ್ಟ್ರೇಲಿಯ ವಿರುದ್ಧ ಭಾರತಕ್ಕೆ 2-1 ಅಂತರದಿಂದ ಪಾರಮ್ಯ ಸಾಧಿಸಲು ಸಾಧ್ಯವಾಯಿತು. ಸದ್ಯ ಸರಣಿಯನ್ನು ಕೈ ವಶ ಮಾಡಿಕೊಳ್ಳುವತ್ತ ಭಾರತೀಯ ತಂಡ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ಇದು ಸಮಸ್ತ ಭಾರತೀಯರ ಪಾಲಿಗೆ ದೊಡ್ಡ ಸಾಧನೆಯೇ ಸರಿ.

ಟೀಕೆಗೆ ಉತ್ತರಿಸಿದ ಮಾಯಾಂಕ್: ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟಗಳಲ್ಲಿ ಟೀಕೆ ವ್ಯಕ್ತವಾಗುವುದು ಸಾಮಾನ್ಯ. ಅಂತಹುದೇ ಸನ್ನಿವೇಶವನ್ನು ಮಾಯಾಂಕ್ ಕೂಡ ಅನುಭವಿಸಿದರು. ಹೌದು, ಮಾಯಾಂಕ್ ಇನ್ನೇನು ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಆರಂಭಿಸಬೇಕಿತ್ತು. ಈ ಹೊತ್ತಿಗೆ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಹಾಲಿ ಕಮೆಂಟೇಟರ್ ಕೆರ್ರಿ ಓ ಕೀಫ್ ಬಾಂಬ್ ಒಂದನ್ನು ಸಿಡಿಸಿಯೇ ಬಿಟ್ಟರು. ಮಾಯಾಂಕ್ ರಣಜಿ ಕ್ರಿಕೆಟ್ ನಲ್ಲಿ ತ್ರಿಶತಕ ಸಿಡಿಸಿದ್ದು ಯಾವುದೋ ಹೋಟೆಲ್ ವೇಟರ್ ಗಳ ಮುಂದೆ ಇರಬೇಕು ಎಂದಿದ್ದರು. ಕೆರ್ರಿ ಓ ಕೀಫ್ ಟೀಕೆಗೆ ಅದೇ ದಿನ 76 ರನ್ ಬಾರಿಸುವ ಮೂಲಕ ಮಾಯಾಂಕ್ ದಿಟ್ಟ ಉತ್ತರ ನೀಡಿದರು. ಎರಡನೇ ಇನಿಂಗ್ಸ್ ನಲ್ಲೂ ಮತ್ತೊಂದು ಸುಂದರ ಇನಿಂಗ್ಸ್ ಕಟ್ಟಿದರು. ಬೆನ್ನಲ್ಲೇ ಕರ್ರಿ ಓ ಕೀಫ್ ಟೀಕೆಗೆ ಭಾರತ ಸೇರಿದಂತೆ ವಿಶ್ವದ ಪ್ರಮುಖ ಮಾಜಿ ಹಾಲಿ ಕ್ರಿಕೆಟಿಗರಿಂತ ವ್ಯಾಪಕ ಟೀಕೆ ವ್ಯಕ್ತವಾಯಿತು. ಬೆನ್ನಲ್ಲೇ ಕೆರ್ರಿ ಓ ಕೀಫ್ ಕ್ಷಮೆ ಕೇಳಿದರು. ಮಾಯಾಂಕ್ ಅವರನ್ನು ಬೇಕೆಂದು ಆ ತರಹ ನಿಂದಿಸಲಿಲ್ಲ. ಅಥವಾ ರಣಜಿ ಕ್ರಿಕೆಟ್ ಕೂಟವನ್ನು ಅವಮಾನ ಮಾಡುವ ಉದ್ದೇಶ ಹೊಂದಿಲ್ಲ. ಯಾರಿಗಾದರೂ ಬೇಸರವಾಗಿದ್ದರೆ ಕ್ಷಮಿಸಿ ಎಂದು ತಿಳಿಸಿದ್ದರು.

ಯಾರಿವರು ಮಾಯಾಂಕ್?: ಪೂರ್ಣ ಹೆಸರು ಮಾಯಾಂಕ್ ಅನುರಾಗ್ ಅಗರ್ವಾಲ್, 1991ರಲ್ಲಿ ಬೆಂಗಳೂರಿನಲ್ಲಿ ಜನನ. 27 ವರುಷ. ಭಾರತ ತಂಡದ ಪರ ಟೆಸ್ಟ್ ಆಡುವ ಮೂಲಕ ಟೆಸ್ಟ್ ಕ್ರಿಕೆಟ್ ಲೋಕಕ್ಕೆಕಾಲಿಟ್ಟಿದ್ದಾರೆ. ಭಾರತದ ಪರ ಇನ್ನೂ ಏಕದಿನ ಹಾಗೂ ಟಿ20 ಪಂದ್ಯ ಆಡಿಲ್ಲ. ರಣಜಿ ಕ್ರಿಕೆಟ್ ಕೂಟದಲ್ಲಿ 47 ಪಂದ್ಯ ಆಡಿದ್ದಾರೆ. ಒಟ್ಟು 8 ಶತಕ ಹಾಗೂ 21 ಅರ್ಧಶತಕ ಬಾರಿಸಿದ್ದಾರೆ. ಒಟ್ಟಾರೆ 3717 ರನ್ ಬಾರಿಸಿದ್ದಾರೆ. ಅಜೇಯ 304 ರನ್ ವೈಯಕ್ತಿಕ ಶ್ರೇಷ್ಠ ರನ್. ಒಟ್ಟು 57ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ. ಒಟ್ಟಾರೆ 3605 ರನ್ ಗಳಿಸಿದ್ದಾರೆ. 17 ರನ್ ವೈಯಕ್ತಿಕ ಅತ್ಯಧಿಕ ರನ್. 12 ಶತಕ ಮತ್ತು 14 ಅರ್ಧಶತಕ ಸಿಡಿಸಿದ್ದಾರೆ. ಇದುವರೆಗೆ ಐಪಿಎಲ್ ಸೇರಿದಂತೆ ದೇಶಿ ಕ್ರಿಕೆಟ್ ಕೂಟದಲ್ಲಿ 111 ಪಂದ್ಯ ಆಡಿದ್ದಾರೆ. 111 ರನ್ ವೈಯಕ್ತಿಕ ಶ್ರೇಷ್ಠ ಬ್ಯಾಟಿಂಗ್. 1 ಶತಕ 15 ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದಾರೆ.

ಹಲವು ತಂಡಗಳ ಪರ ಆಡಿರುವ ಅನುಭವ: ಮಾಯಾಂಕ್ ಭಾರತ ತಂಡವನ್ನು ಹೊರತುಪಡಿಸಿದಂತೆ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಟಿ20 ಪ್ರಮುಖ ತಂಡಗಳಾದ ಡೆಲ್ಲಿ ಡೇರ್ ಡೆವಿಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡಿದ್ದಾರೆ. ಐಪಿಎಲ್ ನಲ್ಲಿ ಶ್ರೇಷ್ಠ ನಿರ್ವಹಣೆ ನೀಡಿ ಗಮನ ಸೆಳೆದಿದ್ದಾರೆ. ಉಳಿದಂತೆ ರಣಜಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ತ್ರಿಶತಕವನ್ನೂ ಭಾರಿಸಿ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ ಹಲವು ಸಲ ತಂಡವನ್ನು ಗೆಲ್ಲಿಸಲು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಉಳಿದಂತೆ ಭಾರತ ಎ ತಂಡ ಪ್ರತಿನಿಧಿಸಿದ್ದಾರೆ. 19 ವರ್ಷ ವಯೋಮಿತಿಯೊಳಗಿನ ಭಾರತ ತಂಡ ಹಾಗೂ 19 ವರ್ಷ ವಯೋಮಿತಿಯೊಳಗಿನ ರಾಜ್ಯ ತಂಡವನ್ನು ಪ್ರತಿನಿಧಿಸಿ ಗಮನ ಸೆಳೆಯುವ ಆಟವನ್ನು ಆಡಿದ್ದಾರೆ.