ತೆರೆ ಮೇಲೆ ಬರಲು ಸಜ್ಜಾಗಿದೆ 'ಕೇಸರಿ'
ತೆರೆ ಮೇಲೆ ಬರಲು ಸಜ್ಜಾಗಿದೆ ‘ಕೇಸರಿ’
March 18, 2019
Anchor Reena joins Decathlon Color Run 2019 and completes 10k run
Anchor Reena joins Decathlon Color Run 2019 and completes 10k run
March 23, 2019
ತೆರೆ ಮೇಲೆ ಬರಲು ಸಜ್ಜಾಗಿದೆ 'ಕೇಸರಿ'
ತೆರೆ ಮೇಲೆ ಬರಲು ಸಜ್ಜಾಗಿದೆ ‘ಕೇಸರಿ’
March 18, 2019
Anchor Reena joins Decathlon Color Run 2019 and completes 10k run
Anchor Reena joins Decathlon Color Run 2019 and completes 10k run
March 23, 2019

ಹ್ಯುಮನ್ ಇಂಟ್ರೆಸ್ಟಿಂಗ್ – ಹನುಮಂತ

ಹ್ಯುಮನ್ ಇಂಟ್ರೆಸ್ಟಿಂಗ್ - ಹನುಮಂತ

Image from post regarding ಹ್ಯುಮನ್ ಇಂಟ್ರೆಸ್ಟಿಂಗ್ - ಹನುಮಂತ

– ಕುರಿ ಕಾಯುವವನ ಹಾಡಿಗೆ ಎಲ್ಲರೂ ಫಿದಾ
– ಮೊಬೈಲ್ ನಲ್ಲಿ ಹಾಡು ಕೇಳುತ್ತಿದ್ದವ ಈಗ ಸಿಂಗರ್
– ಓದಿಲ್ಲ,ಸಂಗೀತ ತರಬೇತಿಯಿಲ್ಲ ಆದರೂ ಗಾಯಕ

ಸಾಧನೆಯ ಮೆಟ್ಟಿಲೇರಲು ವಿದ್ಯಾಭ್ಯಾಸ ಬೇಕೆ ಬೇಕು ಅಂತಾರೆ ಅದು ನಿಜ. ಆದರೆ ಕಡಿಮೆ ವಿದ್ಯಾಭ್ಯಾಸ ಹೊಂದಿರುವವರು ಸಾಧನೆ ಮಾಡಬಲ್ಲರು ಎನ್ನುವುದಕ್ಕೆ ಈ ಹುಡುಗನ ಕಥೆಯೇ ಅದ್ಭುತ ಉದಾಹರಣೆ. ಪ್ರತಿಭೆಯಿದ್ದರೆ ಇಡೀ ವಿಶ್ವವನ್ನೇ ಗೆಲ್ಲಬಹುದು ಎನ್ನುವುದನ್ನು ಈತ ಸಾಬೀತುಪಡಿಸಿದ್ದಾನೆ.

ಕುರಿ ಮೇಯಿಸುತ್ತಾ ಹಾಡು ಕಲಿತ

ಓದಿದ್ದು 5ನೇ ಕ್ಲಾಸ್. ಸಂಗೀತ ತರಬೇತಿ ಪಡೆದಿಲ್ಲ.ಕುರಿ ಮೇಯಿಸುವುದು ಈತನ ಕಸುಬು. ಆದರೂ ಈತ ಸಂಗೀತ ಸಾಧಕರ ಮುಂದೆ ನಿಂತು ಹಾಡಿದ್ದಾನೆ. ಅಷ್ಟು ಮಾತ್ರವಲ್ಲ ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅತಿ ದೊಡ್ಡ ರಿಯಾಲಿಟೀ ಶೋ ಸರಿಗಮಪ ಸೀಸನ್ -15 ನ ರನ್ನರ್ ಅಪ್ !! ಈಗ ಸರಿಗಮಪ ರಿಯಾಲಿಟೀ ಶೋದ ಸ್ಟಾರ್!!

ಜಡ್ಜಸ್ ಮನಸೆಳೆದ ಹನುಮಂತ

ಹಾವೇರಿಯ ಸವಣೂರು ತಾಲೂಕಿನ ಚಿಲ್ಲೂರು ಬಡ್ನಿ ತಾಂಡಾದ ನಿವಾಸಿ, ಈತನೇ ಈ ಹನುಮಂತ. ಬಾಲ್ಯದಿಂದಲೂ ಕುರಿ ಕಾಯುವ ಕೆಲಸ ಮಾಡುತ್ತಿದ್ದ. ಓದಿದ್ದು ಕೇವಲ ಐದನೇ ಕ್ಲಾಸ್. ಕುರಿ ಮೇಯಿಸುತ್ತಾ ಮೊಬೈಲ್ ನಲ್ಲಿ ಹಾಡು ಕೇಳುತ್ತಾ ಹಾಡುವುದೇ ಈತನ ಕಾಯಕವಾಗಿತ್ತು. ಜನಪದ ಹಾಡುಗಳಿಂದಾನೇ ಹೆಸರು ಪಡೆದ ಈತ ಜನಪದ ಹಕ್ಕಿಯೆಂದೇ ಖ್ಯಾತಿ ಪಡೆದಿದ್ದ. ಮುಗ್ಧ ಮಾತುಗಳಿಂದಲೇ ಜಡ್ಜಸ್ ಹಾಗೂ ವೀಕ್ಷಕರ ಗಮನ ಸೆಳೆದಿದ್ದ.

ಮೊಬೈಲ್ ನಲ್ಲೇ ಹಾಡು ಕೇಳುತ್ತಿದ್ದ

ಹನುಮಂತಪ್ಪ ತಂದೆ ಮೇಘಪ್ಪ, ತಾಯಿ ಶೀಲವ್ವ ಒಟ್ಟು ಆರು ಜನ ಮಕ್ಕಳು. ಐದನೇ ಮಗನೇ ಹನುಮಂತಪ್ಪ. ಕೇವಲ ಮೊಬೈಲ್ ನಲ್ಲೇ ಹಾಡುಗಳನ್ನು ಆಲಿಸಿ ಲಯಬದ್ಧವಾಗಿ ಹಾಡುವ ಮೂಲಕ ಸರಿಗಮಪ ರಿಯಾಲಿಟೀ ಶೋದಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾನೆ.

ನಿನ್ ಒಳಗೆ ನೀನು ತಿಳಿದು ನೋಡಣ್ಣ

ಸರಿಗಮಪ ಸೀಸನ್ 15ರ ಮೆಗಾ ಆಡಿಷನ್ ನಲ್ಲಿ ಸಂಗೀತ ಮಾಂತ್ರಿಕರ ಮನಗೆದ್ದ ಕುರಿಗಾಹಿ ಹನುಮಂತ ಸೋಷಿಯಲ್ ಮೀಡಿಯಾದಲ್ಲಿ ಹೆಸರು ಮಾಡಿದ್ದ. ಈತ ಹಾಡಿದ ಹಾಡುಗಳೆಲ್ಲವೂ ವೈರಲ್ ಆಗಿದ್ದವು. ಅದರಲ್ಲೂ ಮೆಗಾ ಆಡಿಷನ್ ನಲ್ಲಿ ಹಾಡಿದ `ನಿನ್ ಒಳಗೆ ನೀನು ತಿಳಿದು ನೋಡಣ್ಣ’ ಎಂಬ ಅರ್ಥಪೂರ್ಣ ಹಾಡು ತೀರ್ಪುಗಾರರ ಕಣ್ತೆರೆಸುವಂತೆ ಮಾಡಿತ್ತು. ಇನ್ನು ಅಲ್ಲಿ ನೆರೆದಿದ್ದ ಅಭಿಮಾನಿಗಳು ಮತ್ತೊಮ್ಮೆ ಹಾಡುವಂತೆ ಹನುಮಂತನನ್ನು ಕೇಳಿಕೊಂಡಿದ್ದರು. ಅಷ್ಟರ ಮಟ್ಟಿಗೆ ಹನುಮಂತನ ಹಾಡೆಂದರೆ ಜನ ಇಷ್ಟ ಪಟ್ಟಿದ್ದರು.

ನಾದ ಬ್ರಹ್ಮ ಹಂಸಲೇಖ ಸರ್ ಫಿದಾ

ಮುಗ್ಧ ಮನಸ್ಸಿನ ಹಳ್ಳಿ ಹೈದ. ಈತನ ಪ್ರತಿಭೆಯ ಅನಾವರಣಕ್ಕೆ ಸರಿಗಮಪ ವೇದಿಕೆ ದೊಡ್ಡ ಅವಕಾಶವನ್ನೇ ಕಲ್ಪಿಸಿಕೊಟ್ಟಿತ್ತು. ಈತನ ಕಂಚಿನ ಕಂಠದಿಂದ ಹೊರಹೊಮ್ಮಿದ ಜಾನಪದ ಹಾಡಿಗೆ ನಾದ ಬ್ರಹ್ಮ ಹಂಸಲೇಖ ಸರ್ ಅವರೇ ಫಿದಾ ಆಗಿದ್ದರು. ತಮ್ಮ ಬಳಿ ಕರೆದು ಹನುಮಂತನಿಗೆ ತಮ್ಮ ಕೊರಳಲ್ಲಿದ್ದ ವಸ್ತ್ರವನ್ನು ಆತನಿಗೆ ನೀಡಿ ಪ್ರೋತ್ಸಾಹ ನೀಡಿದ್ದರು. ಮುಂದೆ ಹಲವು ಸುತ್ತುಗಳಲ್ಲಿ ವಿಭಿನ್ನ ಹಾಡುಗಳನ್ನು ಹಾಡುವ ಮೂಲಕ ಜಡ್ಜಸ್ ಪ್ರೀತಿಗೆ ಪಾತ್ರನಾಗಿದ್ದ ಈ ಹನುಮಂತ.`ಬಡತನದ ಮನೆಯೊಳಗ ಹೆಣ್ಣು ಹುಟ್ಟ ಬಾರದು’,ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವ ಯೋಗಿಯ ನೋಡಲ್ಲಿ, `ನೀ ನೀರಿಗೆ ಬಾರೆ ಚೆನ್ನಿ’ ಮುಂತಾದ ಹಾಡುಗಳನ್ನು ಶೃತಿ ಹಾಗೂ ಲಯಬದ್ಧವಾಗಿ ಹಾಡಿ ಟಾಪ್ ಫೈನಲಿಸ್ಟ್ ಪಟ್ಟಿ ಸೇರಿ ಕೊಂಡಿದ್ದ.

ಅಣ್ಣನಿಂದ ತಂಗಿ ಜೀವನ ಬದಲಾಯಿತು

ಅದೊಂದು ದಿನ ಫ್ಯಾಮಿಲಿಯವರ ಜತೆ ಹಾಡುವ ಸುತ್ತು ಫ್ಯಾಮಿಲಿ ರೌಂಡ್ ಇತ್ತು. ಮನೆಯ ಸದಸ್ಯರೊಡನೆ ಸ್ಪರ್ಧಿಗಳು ಹಾಡಬೇಕು. ಈ ರೌಂಡ್ ನಲ್ಲಿ ಹನುಮಂತ, ತಂಗಿ ಕಮಲ ಜತೆ ಹಾಡಿದ್ದ. ನಿರೂಪಕಿ ಅನುಶ್ರೀ ಅವರು ಕಮಲ ಅವರಿಗೆ ನಿನ್ನಣ್ಣ ಊರಿಗೆ ಬಂದಾಗ ಏನು ಕೊಟ್ಟ ಎಂದು ಕೇಳಿದ್ದರು. ಅದಕ್ಕೆ ಕಮಲ `100 ರೂ. ಕೊಟ್ಟಿದ್ದ. ಅದರಿಂದ ನಾನು ನೋಟ್ ಬುಕ್ ತೆಗೆದು ಕೊಂಡೆ ‘ಎಂದು ಮುಗ್ಧವಾಗಿ ಹೇಳಿದಳು. ಈ ಮಾತು ಎಲ್ಲರನ್ನು ಭಾವುಕರನ್ನಾಗಿಸಿತು. ಆಗ ಜಡ್ಜ್ ವಿಜಯ್ ಪ್ರಕಾಶ್ ಅವರು ನೀನು ಇವತ್ತು ನೂರು ರೂ.ಗೆ ಇರುವ ಬೆಲೆ ತೋರಿಸಿಕೊಟ್ಟೆ ಎಂದರು. ತಕ್ಷಣ ಫ್ಯಾಮಿಲಿ ರೌಂಡ್ ನೋಡಲು ಆಗಮಿಸಿದ್ದ ಕಾನ್ಫಿಡೆಂಟ್ ಗ್ರೂಪ್ ಮಾಲೀಕರು ಆಕೆಯ ವಿದ್ಯಾಭ್ಯಾಸಕ್ಕೆ 50,000 ರೂ. ಹಾಗೂ ಓದು ಮುಗಿದ ಬಳಿಕ ತಮ್ಮ ಕಂಪೆನಿಯಲ್ಲೇ ಕೆಲಸ ಕೊಡುವುದಾಗಿ ಘೋಷಿಸಿದರು.

ಸಿನಿಮಾದಲ್ಲಿ ಹಾಡಲು ಅವಕಾಶ ಸಿಕ್ಕಿತು

ಲುಂಗಿ ,ಶರ್ಟ್ ಹಾಗೂ ಕೊರಳಿಗೆ ಒಂದು ಶಾಲು ಧರಿಸಿ ಅವನದೇ ಶೈಲಿಯಲ್ಲಿ ಹಾಡಿಗಿಳಿದರೆ ನೆರೆದ ಪ್ರೇಕ್ಷಕರು , ಶೋಗೆ ಆಗಮಿಸಿದ ಅತಿಥಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದರು. ನಿರ್ದೇಶಕ ಯೋಗರಾಜ್ ಭಟ್ ಅವರು ಕಾರ್ಯಕ್ರಮಕ್ಕೆ ಬಂದಿದ್ದಾಗ ಹನುಮಂತ ಅವರಿಗೆ ಹಾಡುವ ಅವಕಾಶ ನೀಡುವುದಾಗಿ ಹೇಳಿದ್ದರು. ಇತ್ತೀಚೆಗೆ `ಸೀತಾರಾಮ ಕಲ್ಯಾಣ’ ಚಿತ್ರದ ನಿರ್ಮಾಪಕರು ಕಾರ್ಯಕ್ರಮವೊಂದರಲ್ಲಿ ಹನುಮಂತನ ಹಾಡಿಗೆ ಮೆಚ್ಚಿಕೊಂಡು ಆರ್ಥಿಕ ನೆರವು ನೀಡಿದ್ದರು. ದರ್ಶನ್ ಅಭಿನಯದ ಬಹುನಿರೀಕ್ಷೆಯ ಚಿತ್ರ `ರಾಬರ್ಟ್’ಗೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದು, ಯೋಗರಾಜ್ ಭಟ್ ಅವರು ಬರೆದಿರುವ ಹಾಡನ್ನು ಹನುಮಂತ ಹಾಡಲಿದ್ದಾನೆ.

ಸರ್ಪ್ರೈಸ್ ಗೆ ಗಳಗಳನೆ ಅತ್ತು ಬಿಟ್ಟ

ಜೀ ಕುಟುಂಬ ಅವಾರ್ಡ್ಸ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ಕಿರುತೆರೆಯಲ್ಲಿ ನಟಿಸಿ ಜನರ ಮೆಚ್ಚುಗೆಯನ್ನು ಪಡೆದಿರುವ ನಟ-ನಟಿ ಸೇರಿದಂತೆ ಕಲಾವಿದರಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಗಿತ್ತು. ಇದೇ ಕಾರ್ಯಕ್ರಮದಲ್ಲಿ ಜನತೆ ಮೆಚ್ಚಿದ ಅಚ್ಚು ಮೆಚ್ಚಿನ ಸ್ಪರ್ಧಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಈ ಪ್ರಶಸ್ತಿಗೆ ಐದು ಮಂದಿ ನಾಮಿನೇಟ್ ಆಗಿದ್ದರು. ಆದರೆ ಕೊನೆಯಲ್ಲಿ ಈ ಪ್ರಶಸ್ತಿ ಸರಿಗಮಪ ಸೀಸನ್ 15 ನ ಸ್ಪರ್ಧಿ ಹನುಮಂತನಿಗೆ ಲಭಿಸಿತ್ತು. ಹನುಮಂತ ವೇದಿಕೆ ಮೇಲೆ ಹೋಗಿ ಪ್ರಶಸ್ತಿ ಸ್ವೀಕರಿಸಿದ್ದ. ಅದೇ ಸಂದರ್ಭದಲ್ಲಿ ಹನುಮಂತನಿಗೆ ವಾಹಿನಿ ಒಂದು ಸರ್ಪ್ರೈಸ್ ನೀಡಿತ್ತು. ಆ ಸರ್ಪ್ರೈಸ್ ನೋಡಿ ಹನುಮಂತ ವೇದಿಕೆ ಮೇಲೆ ಕಣ್ಣೀರು ಹಾಕಿದ್ದ. ಆ ದಿನ ದೂರದ ಹಳ್ಳಿಯಿಂದ ಮಗನನ್ನು ನೋಡಲು ಕೈಯಾರೆ ಮಾಡಿದ ಜೋಳದ ರೊಟ್ಟಿಯೊಂದಿಗೆ ತಾಯಿ ಬಂದಿದ್ದರು. ಆ ಒಂದು ಕ್ಷಣ ಹನುಮಂತ ಮೂಕನಾಗಿ ನಿಂತು ಗಳ ಗಳನೇ ಅತ್ತು ಬಿಟ್ಟ.

ಹೀಗೆ ಹಳ್ಳಿಯಿಂದ ಬಂದು ಹಿಂದೆಂದು ನೋಡಿರದ ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸಿ ಇಷ್ಟು ದೊಡ್ಡ ರಿಯಾಲಿಟೀ ಶೋನಲ್ಲಿ ಪಾಲ್ಗೊಂಡು ರನ್ನರ್ ಅಪ್ ಆಗಿ ಹೊರಹೊಮ್ಮಿದ ಹನುಮಮತನ ಸಾಧನೆ ನಿಜಕ್ಕೂ ಹೆಮ್ಮೆ ಪಡುವಂತದ್ದು.