ಇಯರ್ ಫೋನ್ ಬಳಸುವ ಮುನ್ನ ಒಮ್ಮೆ ಯೋಚಿಸಿ
ಇಯರ್ ಫೋನ್ ಬಳಸುವ ಮುನ್ನ ಒಮ್ಮೆ ಯೋಚಿಸಿ
February 2, 2019
ದಿ ರೀನಾ ಡಿಸೋಜ ಶೋ: ಯಜುವೇಂದ್ರ ಚಹಲ್ ಸಿಂಗ್
ದಿ ರೀನಾ ಡಿಸೋಜ ಶೋ: ಯಜುವೇಂದ್ರ ಚಹಲ್ ಸಿಂಗ್
February 6, 2019
ಇಯರ್ ಫೋನ್ ಬಳಸುವ ಮುನ್ನ ಒಮ್ಮೆ ಯೋಚಿಸಿ
ಇಯರ್ ಫೋನ್ ಬಳಸುವ ಮುನ್ನ ಒಮ್ಮೆ ಯೋಚಿಸಿ
February 2, 2019
ದಿ ರೀನಾ ಡಿಸೋಜ ಶೋ: ಯಜುವೇಂದ್ರ ಚಹಲ್ ಸಿಂಗ್
ದಿ ರೀನಾ ಡಿಸೋಜ ಶೋ: ಯಜುವೇಂದ್ರ ಚಹಲ್ ಸಿಂಗ್
February 6, 2019

ಚಿನ್ನದ ಮೀನು ನಿಶಾ ಮಿಲೆಟ್

ಚಿನ್ನದ ಮೀನು ನಿಶಾ ಮಿಲೆಟ್

Image from post regarding ಚಿನ್ನದ ಮೀನು ನಿಶಾ ಮಿಲೆಟ್

– ರೀನಾ ಡಿಸೋಜಾ ಸಂದರ್ಶನದಲ್ಲಿ ಗೋಲ್ಡನ್ ಫಿಶ್ ಮಾತು

ಅಂದು ಈಕೆಗೆ ನೀರನ್ನು ಕಂಡರೆ ಭಯ. ಆದರೆ ಇಂದು ಒಲಿಂಪಿಕ್ಸ್ ಈಜು ತಂಡದಲ್ಲಿ ಭಾಗವಹಿಸಿದ್ದ ಪ್ರತಿಭಾನ್ವಿತ ಈಜುಗಾರ್ತಿ. ಅವರೇ ಈಜಿನಲ್ಲಿ ಇಡೀ ವಿಶ್ವದ ಗಮನ ಸೆಳೆದ ಪ್ರತಿಭಾನ್ವಿತ ಈಜು ತಾರೆ , ಅರ್ಜುನ ಪ್ರಶಸ್ತಿ ವಿಜೇತೆ ನಿಶಾ ಮಿಲೆಟ್ !

ಇವರಿಗೆ ಐದನೇ ವಯಸ್ಸಿನಲ್ಲಿರುವಾಗ ನೀರಲ್ಲಿ ಮುಳುಗಿ ಹೋದ ಅನುಭವ ಆಗಿತ್ತಂತೆ. ನೀರ ಮೇಲಿನ ಅಂಜಿಕೆ ಹೋಗಲಾಡಿಸಲೆಂದು ಈಜು ಕಲಿತರು. ಅಂದು ನೀರ ಮೇಲಿನ ಭಯದಲ್ಲಿ ಕಲಿತ ಈಜು ಇವರಿಗಿಂದು ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುವುದಕ್ಕೆ ಸಹಕಾರ ನೀಡಿತು.ಇದೆಲ್ಲಾ ಹೇಗೆ ಸಾಧ್ಯವಾಯಿತು ಅನ್ನೋದರ ಬಗ್ಗೆ ಸ್ವತಃ ನಿಶಾ ಮಿಲೆಟ್ ಅವರೇ ಮಾತನಾಡಿದ್ದಾರೆ.ವೆಬ್ ಚಾನೆಲ್ ನಲ್ಲಿ ಮೂಡಿಬರುತ್ತಿರುವ ರೀನಾ ಡಿಸೋಜ ಶೋ- ಎಪಿಸೋಡ್ 4 ನಲ್ಲಿ ನಿಶಾ ಮಿಲೆಟ್ ತಮ್ಮ ಕ್ರೀಡಾ ಕ್ಷೇತ್ರದಲ್ಲಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕ್ರೀಡಾ ನಿರೂಪಕಿ ರೀನಾ ಡಿಸೋಜಾ ಅವರ ಪ್ರಶ್ನೆಗಳಿಗೆ ನಿಶಾ ಮಿಲೆಟ್ ಉತ್ತರಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.

ಈಜು ಕಲಿತ ಆ ದಿನಗಳು

ನಿಶಾ ಮಿಲೆಟ್ ಅವರಿಗೆ ಮನೆ ಪಕ್ಕದಲ್ಲಿದ್ದ ಸಣ್ಣ ಕೆರೆಯೇ ಈಜು ಕಲಿಯಲು ಪ್ರೇರಣೆ. ತಮ್ಮ ಐದನೇ ವರ್ಷದ ಅವಧಿಯಲ್ಲಿ ಗೆಳೆತಿಯರ ಜತೆ ಆಟ ಆಡುತ್ತಿರುವ ವೇಳೆ ಆ ಕೆರೆಯಲ್ಲಿ ಮುಳುಗಿ ಹೋದ ಅನುಭವವಾಯಿತು. ಇನ್ನು ಮುಂದೆ ನೀರಿನ ಕಡೆ ಹೋಗಲೇ ಬಾರದು ಎನ್ನುವ ನಿರ್ಧಾರವನ್ನು ಮಾಡಲು ಮುಂದಾದರು. ಆದರೆ ಅವರ ತಂದೆ ನೀರ ಮೇಲಿನ ಭಯವನ್ನು ಹೋಗಲಾಡಿಸಲೆಂದು ಈಜು ಕಲಿಯಲು ಪ್ರೋತ್ಸಾಹ ನೀಡಿದರು.
ಒಂಭತ್ತನೇ ವರ್ಷದಲ್ಲಿರುವಾಗ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡು ಈಜು ಅಭ್ಯಾಸವನ್ನು ಶುರು ಮಾಡಿದರು. ಈಜುಕೊಳದಲ್ಲಿ ಸಲೀಸಾಗಿ ಈಜಾಡುವುದರ ಮೂಲಕ ನೀರ ಮೇಲಿನ ಅಂಜಿಕೆ ದೂರವಾಯ್ತು. ಇವರ ತಂದೆಯೂ ಉತ್ತಮ ಈಜುಗಾರರು. ಹೀಗಾಗಿ ಮಗಳಿಗೆ ಮಾರ್ಗದರ್ಶನ ಮಾಡುವುದರ ಮೂಲಕ ಆಕೆಯ ಈಜು ಜರ್ನಿಗೆ ಸಹಕರಿಸಿದರು. ತನ್ನ ಒಂಭತ್ತನೇ ವರ್ಷ ವಯಸ್ಸಿನಲ್ಲಿ ನಿಶಾ ಅವರು ಚೆನ್ನೈಯ ಶಣೈ ನಗರ ಕ್ಲಬ್ ನಲ್ಲಿ ಈಜು ಕಲಿತರು. ಇದಾದ ಬಳಿಕ ಚೆನ್ನೈನಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ 50 ಮೀಟರ್ ಫ್ರೀಸ್ಟೈಲ್ ನಲ್ಲಿ ಪ್ರಥಮ ಬಹುಮಾನ ಪಡೆದರು. ಈ ಅಭೂತ ಪೂರ್ವ ಕ್ಷಣವನ್ನು ನಿಶಾ ಮಿಲೆಟ್ ಅವರು ಸಂತಸದಿಂದ ವಿವರಿಸುತ್ತಾ ಹೋದರು.

ಒಲಿಂಪಿಕ್ಸ್ ನಲ್ಲಿ ಪಾಲ್ಗೊಂಡೆ

ಒಂಭತ್ತನೇ ವಯಸ್ಸಿನಲ್ಲಿ ಬಹುಮಾನ ಗೆದ್ದ ಬಳಿಕ ನಿಶಾ ಅವರು ನಿರಂತರ ಅಭ್ಯಾಸದಲ್ಲಿ ತೊಡಗಿದರು. ಹೀಗಾಗಿ ಸಾಲು ಸಾಲು ಪ್ರಶಸ್ತಿಗಳು ಅವರನ್ನು ಅರಸಿ ಕೊಂಡು ಬಂದವು. ನಿಶಾ ಅವರು ಜ್ಯೂನಿಯರ್ ವಿಭಾಗದಲ್ಲಿಯೇ ಕಠಿಣ ಪರಿಶ್ರಮದಿಂದ ಯಶಸ್ಸನ್ನು ಸಾಧಿಸಿ ಬಿಟ್ಟರು. ಕಾರ್ಯಕ್ರಮದಲ್ಲಿ 1996ರ ಒಲಿಂಪಿಕ್ಸ್ ಅವಕಾಶ ತಪ್ಪಿ ಹೋಗಿರುವ ಕುರಿತು ಮಾತನಾಡಿ ಬೇಸರ ವ್ಯಕ್ತ ಪಡಿಸಿದರು. `ವಯಸ್ಸಿಗೂ ಮೀರಿದ ಸಾಧನೆ ನನ್ನದಾಗಿರುವುದರಿಂದ ಒಲಿಂಪಿಕ್ಸ್ ಗೆ ಆಯ್ಕೆಯಾಗಲು ಅರ್ಹತೆ ಇದ್ದರೂ, ವಯಸ್ಸಿನ ಅಭಾವದಿಂದ ಕೈ ತಪ್ಪಿತು. ಆಗ ನನಗಾಗಿದ್ದು ಕೇವಲ 14 ವರ್ಷ ವಯಸ್ಸು. ಆದರೂ ಪ್ರಯತ್ನ ಮುಂದುವರಿಸಿದೆ. ಗುರಿಯನ್ನು ಸಾಧಿಸಿಯೇ ಸಿದ್ದವೆಂದು ಪ್ರತಿ ದಿನ ಅಭ್ಯಾಸ ನಡೆಯುತ್ತಲೇ ಇತ್ತು. ಮುಂಬರುವ 2000ದ ಒಲಿಂಪಿಕ್ಸ್ ಕ್ರೀಡಾ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡು ಎಂದು ಮನೆಯವರು ಬೆಂಬಲ ನೀಡಿದರು. ಮುಂದೆ 2000 ಇಸವಿಯ ಸಿಡ್ನಿ ಒಲಿಂಪಿಕ್ಸ್ ಈಜು ತಂಡದಲ್ಲಿ ಭಾಗವಹಿಸಿದೆ ಎಂದು ಹೆಮ್ಮೆಯಿಂದ ನುಡಿದರು.ನನ್ನ ಈ ಸಾಧನೆಗೆ ರಾಷ್ಟ್ರೀಯ ಕೋಚ್ ಪ್ರದೀಪ್ ಕುಮಾರ್ ಅವರ ಮಾರ್ಗದರ್ಶನ ತುಂಬಾನೇ ಪ್ರಾಮುಖ್ಯತೆ ವಹಿಸಿದೆ. ಬೆಂಗಳೂರಿನ ಬಸವನಗುಡಿ ಈಜು ಕೇಂದ್ರದಲ್ಲಿ ನನಗೆ ಉತ್ತಮ ತರಬೇತಿ ಸಿಕ್ಕಿದ್ದು ನನ್ನ ಅದೃಷ್ಟ. ಅವರ ಬೆಂಬಲ ಹಾಗೂ ಇದೇ ದಾರಿಯಲ್ಲಿ ಮುಂದುವರಿ ಎನ್ನುವ ಸಲಹೆ ಸೂಚನೆಗಳನ್ನು ನಾನು ಯಾವತ್ತು ಮರೆಯಲ್ಲ ಎಂದರು.

2004ರ ಒಲಿಂಪಿಕ್ಸ್ ನಲ್ಲಿ ಪಾಲ್ಗೊಂಡಿಲ್ಲ

2000 ಇಸವಿಯ ಒಲಿಂಪಿಕ್ಸ್ ನಂತರ ಹೊಸ ಜವಾಬ್ದಾರಿ ನನ್ನದಾಗಿತ್ತು. ಸಿಡ್ನಿ ಒಲಿಂಪಿಕ್ಸ್ ಸೆಮಿ ಫೈನಲ್ ನಲ್ಲಿ ಅರ್ಹತೆ ಸಿಗದೇ ಇದ್ದುದರಿಂದ ಇನ್ನು ಹೆಚ್ಚಿನ ಪ್ರಯತ್ನ ಮಾಡಬೇಕಾಗಿ ಬಂತು. ಆದರೆ 2002ರಲ್ಲಿ ಕಾಣಿಸಿಕೊಂಡ ಬೆನ್ನು ನೋವು ಸಮಸ್ಯೆ ನನ್ನ ವೃತ್ತಿ ಜೀವನಕ್ಕೆ ತೊಡಕ್ಕನ್ನುಂಟು ಮಾಡಿತು. ಇದಕ್ಕಾಗಿ ಶಸ್ತ್ರ ಚಿಕಿತ್ಸೆಗೂ ಒಳಗಾಗ ಬೇಕಾಯಿತು. ಆರೋಗ್ಯ, ಆರ್ಥಿಕ ಸಮಸ್ಯೆಗಳಿಂದಾಗಿ 2004ರ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳಲು ಅಸಾಧ್ಯವಾಯಿತು ಎಂದು ಬೇಸರಿಸಿಕೊಂಡರು. ಆ ದುಖಃದಿಂದ ಹೊರ ಬರಲು ಸ್ವಿಮಿಂಗ್ ಕ್ಲಾಸ್ ಆರಂಭಿಸಿದೆ ಎಂದರು.

ತಂದೆ-ತಾಯಿಗೆ ಅಭಾರಿ

ನಾನು ಮಧ್ಯಮ ವರ್ಗದ ಕುಟುಂಬದಿಂದ ಬಂದವಳು.ತಂದೆ ಚೆನ್ನೈಯಲ್ಲಿನ ಎಮ್ಆರ್ ಎಫ್ ಟೈರ್ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಬೆಂಗಳೂರಿನ ಬಸವನಗುಡಿ ಈಜು ಕೇಂದ್ರದಲ್ಲಿ ಉತ್ತಮ ತರಬೇತಿ ನೀಡುತ್ತಿದ್ದರಿಂದ ಅಲ್ಲಿಂದ ಬೆಂಗಳೂರಿಗೆ ಶಿಫ್ಟ್ ಆದೆವು. ನನ್ನ ಈಜು ಸಾಮರ್ಥ್ಯ ಗಮನಿಸಿದ ಕೋಚ್ ಪ್ರದೀಪ್ ಸರ್ ವಿದೇಶದಲ್ಲಿ ಹೆಚ್ಚಿನ ತರಬೇತಿ ಪಡೆಯಿರಿ,ಅಲ್ಲಿ ಇಲ್ಲಿಗಿಂತಲೂ ಹೊಸ ತಂತ್ರಜ್ಞಾನವುಳ್ಳ ಉತ್ತಮ ತರಬೇತಿ ಕೇಂದ್ರಗಳಿವೆ ಎಂದು ಸಲಹೆ ನೀಡುತ್ತಿದ್ದರು. ಹಣದ ಸಮಸ್ಯೆ ಎದುರಾದರೂ ತಂದೆ-ತಾಯಿ ನನ್ನ ವೃತ್ತಿ ಜೀವನಕ್ಕೆ ಒಂಚೂರು ತೊಡಕಾದಂತೆ ನೋಡಿ ಕೊಂಡರು ಎಂದರು. ಈ ಸಂದರ್ಭ ನಿಶಾ ಮಿಲೆಟ್ ಸ್ವಿಮ್ಮಿಂಗ್ ಅಕಾಡೆಮಿ ವೈಶಿಷ್ಟತೆ ಹಾಗೂ ಅದರ ಉದ್ದೇಶ ಕುರಿತು ತಿಳಿಸಿ ಕೊಟ್ಟರು. ಅಕಾಡೆಮಿಗೆ ಪತಿ ಬಿಕ್ರಂಜಿತ್ ಚಟರ್ಜಿಯವರ ಸಹಾಯವನ್ನು ಸ್ಮರಿಸಿಕೊಂಡರು.

ಸೆಗ್ ಮೆಂಟ್ಸ್

ಗ್ರೇ ನಿಕ್ಲ್ಸ್ ಪ್ರಾಯೋಜಕತ್ವದಲ್ಲಿ ಮೂಡಿ ಬಂದ ಗೇಮಿಂಗ್ ಸೆಗ್ ಮೆಂಟ್ ನಲ್ಲಿ ನಿಶಾ ಮಿಲೆಟ್ ಉತ್ಸಾಹದಿಂದ ಪಾಲ್ಗೊಂಡರು. ಮೊದಲ ಗೇಮ್ ನಲ್ಲಿ ಐದು ಅವಕಾಶಗಳನ್ನು ಪಡೆದು ಕೊಂಡರೂ ಸೋಲುಂಡರು. ಈ ತಪ್ಪಿಗೆ ಜ್ಯೂಸ್ ಕುಡಿಯುವ ಮೂಲಕ ಸಣ್ಣ ಶಿಕ್ಷೆಯನ್ನು ಅನುಭವಿಸಬೇಕಾಯಿತು. ಕಾರ್ಯಕ್ರಮದಲ್ಲಿ ಶರ್ಟ್,ಬ್ಯಾಟ್ ಗಳಿಗೆ ಹಸ್ತಾಕ್ಷರ ನೀಡಿದರು. ಎಜುಕೇಟಿವ್ ಸೆಗ್ ಮೆಂಟ್ ನಲ್ಲಿ ನಿಶಾ ಅವರು ಯುವ ಈಜುಗಾರರಿಗೆ.ಈಜು ಕುರಿತಂತೆ ಸಲಹೆ ನೀಡಿದರು. ಉತ್ತಮ ತರಬೇತಿ ಪಡೆಯಲು ಸೂಚಿಸಿದರು. ತ್ಯಾಗ ಹಾಗೂ ಪೋಷಕರ ಪ್ರೋತ್ಸಾಹ,ಕಠಿಣ ಪರಿಶ್ರಮ ಅತ್ಯಂತ ಅವಶ್ಯಕವೆಂದರು. ಜತೆಗೆ ನಿಶಾ ಮಿಲೆಟ್ ಸ್ವಿಮ್ಮಿಂಗ್ ಅಕಾಡೆಮಿ ಯುವ ಈಜುಗಾರರಿಗೆ ಹೇಗೆ ಸಹಾಯವಾಗಬಲ್ಲುದು ಎಂಬುದರ ಬಗ್ಗೆ ಮಾಹಿತಿ ನೀಡಿದರು.

ಫೂಡ್ ಟೇಸ್ಟಿಂಗ್ ಸೆಗ್ ಮೆಂಟ್ ನಲ್ಲಿ ನಿಶಾ ಅವರು ಖಾದ್ಯಗಳ ಸವಿಯನ್ನು ಸವಿದರು. ರಾಪಿಡ್ ಫಾಯರ್ ನಲ್ಲಿ ಕೇಳಲಾಗಿದ್ದ ಎಲ್ಲಾ ಪ್ರಶ್ನೆಗಳಿಗೆ ಫಟಾ ಫಟ್ ಉತ್ತರ ನೀಡಿದರು. ಕಾರ್ಯಕ್ರಮದ ಕೊನೆ ಹಂತದಲ್ಲಿ ಲೀವ್ ಆಕ್ಟೀವ್ ಅವರ ಕಡೆಯಿಂದ ಗಿಫ್ಟ್ ಹ್ಯಾಂಪರ್ ನೀಡಲಾಯಿತು.