ಭವ್ಯ ಭವಿಷ್ಯದ ಕನಸಿನಲ್ಲಿ ದೇವದತ್ತ ಪಡಿಕಲ್
ಭವ್ಯ ಭವಿಷ್ಯದ ಕನಸಿನಲ್ಲಿ ದೇವದತ್ತ ಪಡಿಕಲ್
January 31, 2019
ಚಿನ್ನದ ಮೀನು ನಿಶಾ ಮಿಲೆಟ್
ಚಿನ್ನದ ಮೀನು ನಿಶಾ ಮಿಲೆಟ್
February 4, 2019
ಭವ್ಯ ಭವಿಷ್ಯದ ಕನಸಿನಲ್ಲಿ ದೇವದತ್ತ ಪಡಿಕಲ್
ಭವ್ಯ ಭವಿಷ್ಯದ ಕನಸಿನಲ್ಲಿ ದೇವದತ್ತ ಪಡಿಕಲ್
January 31, 2019
ಚಿನ್ನದ ಮೀನು ನಿಶಾ ಮಿಲೆಟ್
ಚಿನ್ನದ ಮೀನು ನಿಶಾ ಮಿಲೆಟ್
February 4, 2019

ಇಯರ್ ಫೋನ್ ಬಳಸುವ ಮುನ್ನ ಒಮ್ಮೆ ಯೋಚಿಸಿ

ಇಯರ್ ಫೋನ್ ಬಳಸುವ ಮುನ್ನ ಒಮ್ಮೆ ಯೋಚಿಸಿ

Image from post regarding ಇಯರ್ ಫೋನ್ ಬಳಸುವ ಮುನ್ನ ಒಮ್ಮೆ ಯೋಚಿಸಿ

ಇದು ಮೊಬೈಲ್ ಯುಗ. ಪ್ರತಿಯೊಬ್ಬರ ಕೈಯಲ್ಲು ಮೊಬೈಲ್ ಫೋನ್ ಗಳದ್ದೇ ಹಾವಳಿ. ಅದರಲ್ಲು ಸ್ಮಾರ್ಟ್ ಫೋನ್ ಅಂದರೆ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯವರೆಗೂ ಇಷ್ಟ. ಬಹುತೇಕ ಜನರಿಗೆ ಫೋಟೋ ,ಫೇಸ್ ಬುಕ್,ವಾಟ್ಸಾಪ್ ಕ್ರೇಜ್ ಇದ್ದರೆ,ಇನ್ನು ಕೆಲವರಿಗೆ ಮ್ಯೂಸಿಕ್ ಆಲಿಸುವ ಹವ್ಯಾಸ. ಬಸ್,ಕಾರು,ಬೈಕ್,ವಾಕಿಂಗ್ ನಲ್ಲಿಯೂ ಹಾಡುಗಳನ್ನು ಕೇಳುತ್ತಲೇ ಇರಬೇಕು. ತಾವು ಕೇಳುತ್ತಿರುವ ಹಾಡುಗಳು ಇತರರಿಗೆ ತೊಂದರೆಯಾಗ ಬಹುದೆಂದು ಕಿವಿಗೆ ಇಯರ್ ಫೋನ್ ನ್ನು ಬಳಸುತ್ತಾರೆ. ಕೆಲವರಿಗಂತು ಟೈಮ್ ಪಾಸ್ ಮಾಡಲು ಇದರ ಅವಶ್ಯಕತೆ ತುಂಬಾನೆ ಇದೆ. ಇದೀಗ ಮಾರುಕಟ್ಟೆಗೆ ವಿವಿಧ ಬಗೆಯ ಇಯರ್ ಫೋನ್ ಗಳು ಲಗ್ಗೆ ಇಟ್ಟಿವೆ. ನಾನಾ ಬಣ್ಣಗಳಲ್ಲಿರುವ ಇವುಗಳು ಗ್ರಾಹಕರ ಕಣ್ಣಿಗೆ ರಾಚುತ್ತಿವೆ. ಮಾರುಕಟ್ಟೆಗೆ ವಿವಿಧ ಕಂಪೆನಿಗಳ ಮೊಬೈಲ್ ಗಳು ಪರಿಚಯವಾಗುತ್ತಿದ್ದಂತೆ ಇಯರ್ ಫೋನ್ ಗಳ ಬೇಡಿಕೆಯೂ ಹೆಚ್ಚುತ್ತಿದೆ.

ಮಿದುಳನ್ನು ರಕ್ಷಿಸಿಕೊಳ್ಳಿ

ಹೆಚ್ಚಿನ ಸಂದರ್ಭಗಳಲ್ಲಿ ನಾವು ಮಾತನಾಡುವ ವೇಳೆ ಫೋನ್ ಬಿಸಿಯಾಗುವುದನ್ನು ಗಮನಿಸಿದ್ದೇವೆ. ಇದರಿಂದ ನಮ್ಮ ಕಿವಿಗೆ ಫೋನ್ ನ ಬಿಸಿ ತಾಗುತ್ತಿರುತ್ತದೆ. ಅಲ್ಲದೇ ಇದರ ಫ್ರೀಕ್ವೆನ್ಸಿಯಿಂದ ಮಿದುಳಿಗೂ ತುಂಬಾನೆ ತೊಂದರೆಯಾಗಬಹುದು. ಇವುಗಳಿಂದ ರಕ್ಷಣೆ ಸಿಗಲು ಒಂದೇ ದಾರಿ,ಅದು ಇಯರ್ ಫೋನ್. ನಮ್ಮ ಅನುಕೂಲಕ್ಕೆ ತಕ್ಕಂತೆ ಹಾಡುಗಳನ್ನು ಆಲಿಸಬಹುದು. ವಿಡಿಯೋಗಳನ್ನು ನೋಡಬಹುದು. ಇದರಿಂದ ಧ್ವನಿಯ ಸ್ಪಷ್ಟತೆ ಸಿಗುತ್ತದೆ ಹಾಗೂ ಮೊಬೈಲಲ್ಲೇ ಹಾಡು ಕೇಳುವುದಕ್ಕಿಂತಲೂ ಹೆಚ್ಚು ಎಫೆಕ್ಟ್ ಸಿಗುತ್ತದೆ.

ಆನ್ ಲೈನ್ ಗಳಲ್ಲೂ ಲಭ್ಯ:

ಆನ್ ಲೈನ್ ಶಾಪಿಂಗ್ ಈಗಿನ ಟ್ರೆಂಡ್. ಭಾರತದಲ್ಲಿ ಇದು ಸಿಕ್ಕಾ ಪಟ್ಟೆ ಫೇಮಸ್. ತರಕಾರಿಯಿಂದ ಹಿಡಿದು, ಎಲೆಕ್ಟ್ರಾನಿಕ್ಸ್ ಐಟಂಗಳು ಕೂಡ ಮನೆ ಬಾಗಿಲಿಗೆ ಬರುತ್ತವೆ. ನಮಗೆ ಇಯರ್ ಫೋನ್ ಅವಶ್ಯಕತೆ ಇದೆ ಎಂದೆನಿಸಿದರೂ ಇದರಲ್ಲಿ ಆರಿಸಿ ಕೊಳ್ಳಲು ಅವಕಾಶವಿದೆ. ಇವುಗಳಲ್ಲಿ ಹಲವು ವಿಧಗಳಿದ್ದು 200 ರೂ.ನಿಂದ ಹಿಡಿದು 2000ರೂ.ಮಿಕ್ಕಿ ಬೆಲೆಯ ಇಯರ್ ಫೋನ್ ಗಳು ಇವೆ. ಆದರೆ ಆನ್ ಲೈನ್ ಗಳಲ್ಲಿ ಕ್ವಾಲಿಟಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಮೌಲ್ಯ ಹೆಚ್ಚಾಗುತ್ತಾ ಹೋದಂತೆ ಅವುಗಳ ಗುಣಮಟ್ಟವೂ ಹೆಚ್ಚಾಗುತ್ತದೆ. ಕಡಿಮೆ ದರ ಮತ್ತು ಹೆಚ್ಚು ದರ ಇರುವ ಇಯರ್ ಫೋನ್ ಗಳು ಅವುಗಳ ವಯರ್,ಸ್ಪೀಕರ್,ಇಯರ್ ಬಡ್ ಮುಂತಾದವುಗಳಲ್ಲಿ ವ್ಯತ್ಯಾಸವನ್ನುಪಡೆದುಕೊಳ್ಳುತ್ತವೆ.

ಮೊಬೈಲ್ ಜತೆಗಿನ ಇಯರ್ ಫೋನ್ ಬೆಸ್ಟಾ?

ಮೊಬೈಲ್ ಖರೀದಿಸುವಾಗ ಅದರ ಜತೆಗೆ ಇಯರ್ ಫೋನ್ ಗಳಿರುತ್ತವೆ. ಅವುಗಳು ಅತ್ಯುತ್ತಮ ಗುಣ ಮಟ್ಟದವು ಎಂಬುದು ಹಲವರ ಭಾವನೆ. ಮಾರುಕಟ್ಟೆಯಲ್ಲಿ ಸಿಗುವ ಇಯರ್ ಫೋನ್ ಗಳು ಕಳಪೆ ಗುಣಮಟ್ಟದಲ್ಲಿರುತ್ತವೆ. ಅವುಗಳು ಬಹುಬೇಗ ಹಾಳಾಗುತ್ತವೆ ಅನ್ನೋದು ಹಲವರ ವಾದ. ಆದರೆ ಮಾರುಕಟ್ಟೆಯಲ್ಲಿಯೂ ಅತ್ಯುತ್ತಮ ಗುಣ ಮಟ್ಟದ ಇಯರ್ ಫೋನ್ ಗಳು ಸಿಗುತ್ತವೆ. ಹೊಸದಾಗಿ ಖರೀಸಿದ ಮೊಬೈಲ್ ಜತೆಗೆ ಬರುವ ಇಯರ್ ಫೋನ್ ಗಳಿಗಿಂತಲೂ ಅವುಗಳು ಉತ್ತಮ ಗುಣ ಮಟ್ಟದಲ್ಲಿರುತ್ತವೆ. ಇತ್ತೀಚೆಗೆ ಕೆಲವು ಮೊಬೈಲ್ ಕಂಪೆನಿಗಳು ಮೊಬೈಲ್ ನೊಂದಿಗೆ ಇಯರ್ ಫೋನ್ ನೀಡುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಒನ್ ಪ್ಲಸ್ ,ಶಿಯೋಮಿ,ಹಾನರ್ ಮತ್ತಿತರ ಮೊಬೈಲ್ ಕಂಪೆನಿಗಳು ತಮ್ಮ ಬಾಕ್ಸ್ ನಲ್ಲಿ ಇಯರ್ ಫೊನ್ ನ್ನು ನೀಡುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಬೆಲೆ ಹೆಚ್ಚಳವಾಗುವುದು ಒಂದು ಕಾರಣವಾದರೆ,ಆ ಮೊಬೈಲ್ ಜತೆಗೆ ಅತ್ಯುತ್ತಮ ಹೆಡ್ ಫೋನ್ ನೀಡಲು ಸಾಧ್ಯವಿಲ್ಲ ಎನ್ನುವುದು ಮೊಬೈಲ್ ಕಂಪೆನಿಗಳ ಅಭಿಪ್ರಾಯ. ಯಾವುದೇ ಮೊಬೈಲ್ ಕಂಪೆನಿಗಳು ಕಡಿಮೆ ಗುಣಮಟ್ಟದ ಇಯರ್ ಫೋನ್ ನೀಡುವುದರಿಂದ ಎಷ್ಟೇ ಒಳ್ಳೆಯ ಮೊಬೈಲ್ ಆದರೂ ಇಯರ್ ಫೋನ್ ಕಡಿಮೆ ದರ್ಜೆಯಾಗಿರುವುದರಿಂದ ಸಂಗೀತ ಕೇಳಲು ಹಿತ ಅನಿಸದು. ಈ ಕಾರಣದಿಂದ ಮೊಬೈಲ್ ಕಂಪೆನಿಗಳು ಇಯರ್ ಫೋನ್ ನೀಡುವುದಿಲ್ಲ. ಕಂಪೆನಿಗಳಿಗೆ ಗ್ರಾಹಕರ ಸುರಕ್ಷತೆ ಮುಖ್ಯ.ಹೀಗಾಗಿ ಗುಣ ಮಟ್ಟದ ಕೊರತೆ ಕಾರಣದಿಂದಲೂ ಇಯರ್ ಫೋನ್ ಕೊಡಲು ನಿರಾಕರಿಸಿದೆ.

ಉತ್ತಮವಾಗಿರುವುದನ್ನೇ ಆರಿಸಿಕೊಳ್ಳಿ

ನೀವು ಇಯರ್ ಫೋನ್ ಗಳನ್ನು ಆರಿಸುವಾಗ ನಿಮಗೆ ಹಿತ ಎಂದೆನಿಸಿಕೊಳ್ಳುವುದನ್ನೇ ಆಯ್ದು ಕೊಳ್ಳಿ. ಏಕೆಂದರೆ ನಿಮಗೆ ಹಾಡುಗಳನ್ನು ಕೇಳಲು ಅನುಕೂಲಕರವಾಗಿರುತ್ತದೆ. ಮಾರುಕಟ್ಟೆಯಲ್ಲಿ ಇವುಗಳ ಬೆಲೆ 500ರೂ.ನಿಂದ ಆರಂಭವಾಗುತ್ತವೆ.ನಿಮಗೆ ಬೆಸ್ಟ್ ಎಂದೆನಿಸುವುದು ಬೇಕಾದಲ್ಲಿ 1500 ರೂ.ನಿಂದ ಆರಂಭವಾಗುವ ಇಯರ್ ಫೋನ್ ಗಳೇ ಹೆಚ್ಚು ಸೂಕ್ತ. ಕಿವಿ ಸೂಕ್ಷ್ಮ ಅಂಗ. ಸುರಕ್ಷತೆ ದೃಷ್ಟಿಯಲ್ಲಿ ಗುಣಮಟ್ಟದ ಇಯರ್ ಫೋನ್ ಗಳ ಬಳಕೆ ಮುಖ್ಯವಾಗುತ್ತವೆ. ಉತ್ತಮ ಇಯರ್ ಫೋನ್ ಗಳು ಬೇಕಾದಲ್ಲಿ ಅವುಗಳ ಪಟ್ಟಿ ಇಲ್ಲಿದೆ ನೋಡಿ.

ಸೋನಿ ಎಂಡಿಆರ್ ಎಕ್ಸ್ ಬಿ 55

ಸಂಗೀತ ಕೇಳುವವರಿಗೆ ಈ ಇಯರ್ ಫೋನ್ ಉತ್ತಮ ಆಯ್ಕೆ. ಇದರ ದರ ಸುಮಾರು 1500ರೂ.ನಷ್ಟು ಇರುತ್ತದೆ. ಆದರೆ ಇದರಲ್ಲಿ ಕಾಡುವ ಒಂದೇ ಒಂದು ಕೊರತೆ ಎಂದರೆ ಕರೆ ಬಂದಾಗ ಮಾತನಾಡಲು ಸಾಧ್ಯವಿಲ್ಲ.

ಬೋಟ್ ಬಾಸ್ ಹೆಡ್ಸ್ 225

ಈ ಹೆಡ್ ಫೋನ್ ಬಹಳ ಜನಪ್ರಿಯತೆ ಪಡೆದುಕೊಂಡಿದೆ. ಕೈಗೆಟುಕುವ ದರದಲ್ಲಿ ಸಿಗುವುದರಿಂದ ಎಲ್ಲಾ ವರ್ಗದವರು ಇದನ್ನು ಇಷ್ಟ ಪಡುತ್ತಾರೆ. ಇದರ ಬೆಲೆ ಕೇವಲ 500 ರೂ.

ಸೆನ್ ಹೈಸರ್ ಸಿಎಕ್ಸ್ 275 ಎಸ್

ಇದು ಅತ್ಯುತ್ತಮ ಗುಣಮಟ್ಟದ ಇಯರ್ ಫೋನ್ ಎಂದು ಹೇಳಲಾಗುತ್ತಿದೆ. ಇದರ ಬೆಲೆ ಅಮೆಜಾನ್ ನಲ್ಲಿ 1515 ರೂ. ಇದು ಉತ್ತಮ ಧ್ವನಿ,ಬಾಸ್ ಮತ್ತು ಟ್ರೆಬಲ್ ತಂತ್ರಜ್ಞಾನವನ್ನು ಹೊಂದಿದೆ.

ಎಂಐ ದಿ ಬೆಸ್ಟ್

ಇದರ ಬೆಲೆ 399ರಿಂದ ಆರಂಭ. 699ರವೆಗೆ ವಿವಿಧ ದರಗಳಲ್ಲಿ ಲಭ್ಯವಾಗುತ್ತವೆ. ಇವುಗಳು ಮೃದುವಾಗಿರುವುದರಿಂದ ಕಿವಿಗೆ ನೋವಾಗಲಾರದು. ನೀವು ಇಲ್ಲಿ ಕಲರ್ ಇರುವ ಇಯರ್ ಫೋನನ್ನು ಆಯ್ಕೆ ಮಾಡಬಹುದು. ಬ್ಲ್ಯಾಕ್,ಸಿಲ್ ವರ್ ಮತ್ತು ಮೆರುನ್ ಕಲರ್ ಗಳು ಲಭ್ಯವಿದ್ದಾವೆ. ಬೇಸಿಕ್ ಇಯರ್ ಪೋನ್ ಗಳಲ್ಲಿ ಇದು ಉತ್ತಮ ಎಂದು ಹೇಳಬಹುದು. ತೀರ ಅಗ್ಗನು ಅಲ್ಲ,ದುಬಾರಿಯು ಅಲ್ಲ ಎಂಬಂತಿದೆ.

ಬ್ಲೂ ಟೂತ್ ಇಯರ್ ಫೋನ್ :

ಇದೀಗ ಬ್ಲೂ ಟೂತ್ ಸಾಧನಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಇವುಗಳಲ್ಲಿ ವಯರ್ ಗಳಿರು
ವುದಿಲ್ಲ. ವಾಹನ ಚಲಾಯಿಸುವಾಗ ಇಂತಹ ಇಯರ್ ಫೋನ್ ಗಳು ಹೆಚ್ಚು ಉಪಯುಕ್ತ. ಡ್ರೈವಿಂಗ್ ನಲ್ಲಿರುವಾಗಲೇ ಕರೆ ಸ್ವೀಕರಿಸಬಹುದು. ಹಾಡು ಕೇಳಬಹುದು. ವಾಲ್ಯೂಮ್ ಕೂಡ ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು. ಆ ಬಟನ್ ನ್ನು ಕೂಡ
ಇದರಲ್ಲಿ ಕಾಣಬಹುದಾಗಿದೆ. ಬ್ಲೂ ಟೂತ್ ಇಯರ್ ಫೋನ್ ಗಳಲ್ಲೂ ಇದೀಗ ನಾನಾ ವಿಧದ ಹಾಗೂ ವಿವಿಧ ಬೆಲೆಯಲ್ಲಿ ಇಯರ್ ಫೋನ್ ಗಳು ಲಭ್ಯದಲ್ಲಿದ್ದಾವೆ.

ಸುರಕ್ಷಿತವಲ್ಲದ ಇಯರ್ ಫೋನ್ ಗಳಿಂದ ಕಿವಿಗೆ ಅಪಾಯ ತಪ್ಪಿದ್ದಲ್ಲ. ಕೇಳುವ ಕ್ಷಮತೆ ಕಡಿಮೆಯಾಗುತ್ತದೆ. ಸೌಂಡ್ ಜಾಸ್ತಿ ಮಾಡಿ ಕೇಳಿದರೆ ಕಿವಿಯ ಪದರ ಹಾಳಾಗಿ ಸಂಪೂರ್ಣ ಕಿವುಡಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಇಯರ್ ಫೋನ್ ಬೆಲೆ ದುಬಾರಿ ಎಂದೆನಿಸಿದರೂ ಬ್ರಾಂಡೆಡ್ ಇಯರ್ ಫೋನ್ ಗಳನ್ನು ಕೊಂಡುಕೊಳ್ಳುವುದೇ ಉತ್ತಮ.