ಸಿನಿಮಾ ತಾರೆಯರ ಮಕ್ಕಳು ನಟರಾಗುವುದು ,ರಾಜಕಾರಣಿಗಳ ಮಕ್ಕಳು ರಾಜಕೀಯಕ್ಕೆ ಇಳಿಯುವುದನ್ನು ನೋಡಿದ್ದೇವೆ.ಆದರೆ ಇಲ್ಲೊಬ್ಬರಿದ್ದಾರೆ.ಹೇಳೋದಕ್ಕೆ ಅಟೋ ಡ್ರೈವರ್ ಮಗ.ಹೀಗಿದ್ದರೂ ಕ್ರಿಕೆಟ್ ನಲ್ಲಿ ವಿಶ್ವದಲ್ಲಿಯೇ ಹೆಸರು ಮಾಡಿದ್ದಾರೆ.ಈ ಮೂಲಕ ಭಾರತ ಕ್ರಿಕೆಟ್ ತಂಡಕ್ಕೆ ಬೇಡಿಕೆಯ ಕ್ರೀಡಾ ಪಟುವಾಗಿದ್ದಾರೆ.ಅವರೇ ಭಾರತ ಕ್ರಿಕೆಟ್ ತಂಡದ ಖ್ಯಾತ ಬೌಲರ್ ಮಹಮ್ಮದ್ ಸಿರಾಜ್.ಚಿಕ್ಕಂದಿನಿಂದಲೇ ಬಡತನವನ್ನು ನೋಡುತ್ತಾ ಬೆಳೆದ ಇವರಿಗೆ ಜೀವನದಲ್ಲಿ ಮುಂದೆ ಬರಬೇಕೆಂಬ ತುಡಿತ.ಇವರ ನಿರಂತರ ಪರಿಶ್ರಮಕ್ಕೆ ಕೊನೆಗೂ ಕ್ರಿಕೆಟ್ ಕೈ ಹಿಡಿಯಿತು.ಬನ್ನಿ ಇವರೂ ಕ್ರಿಕೆಟ್ ಹಾದಿಯಲ್ಲಿ ನಡೆದು ಬಂದ ರೀತಿ,ಮನೆಯಿಂದ ಇವರಿಗೆ ಸಿಕ್ಕ ಪ್ರೋತ್ಸಾಹ,ಈ ಕುರಿತು ಕುತೂಹಲಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.ನಿಮಗೆಲ್ಲಾ ತಿಳಿದಿರುವಂತೆ ವೆಬ್ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಕಾರ್ಯಕ್ರಮ `ದಿ ರೀನಾ ಡಿಸೋಜಾ ಶೋ ಎಪಿಸೋಡ್ -2’ದಲ್ಲಿ ಇವರು ಮನದಾಳದ ಮಾತುಗಳನ್ನು ತೆರೆದಿಟ್ಟರು.

`ದಿ ರೀನಾ ಡಿಸೋಜಾ ಶೋ ಎಪಿಸೋಡ್ -2′

ಈಗಾಗ್ಲೇ ಕ್ರೀಡಾಭಿಮಾನಿಗಳ ಗಮನ ಸೆಳೆದ ಈ ಕಾರ್ಯಕ್ರಮಕ್ಕೆ ಪ್ರಶಂಸನೀಯ ಮಾತುಗಳು ಕೇಳಿ ಬಂದಿವೆ.ಕ್ರೀಡಾ ದಿಗ್ಗಜರನ್ನು ಆಹ್ವಾನಿಸಿ
ಮಾತನಾಡುವ ಮೂಲಕ ಈ ಶೋ ದಿನದಿಂದ ಜನಪ್ರಿಯವಾಗುತ್ತಿದೆ.ಈ ವಾರವೂ ಖ್ಯಾತ ಕ್ರೀಡಾ ನಿರೂಪಕಿ ರೀನಾ ಡಿಸೋಜಾ ಅವರು ನೇರ ಹಾಗು ಸಾಧನಾ ಪಥದ ಪ್ರಶ್ನೆಗಳನ್ನು ಕೇಳುವುದರ ಮೂಲಕ ಗಮನ ಸೆಳೆಯುತ್ತಾರೆ.ಶೋ ಮೂಲಕ ಕ್ರೀಡಾ ತಾರೆ ಸಿರಾಜ್ ಅವರು ಜೀವನದ ನೈಜ ಸನ್ನಿವೇಶವನ್ನು ಎಳೆ ಎಳೆಯಾಗಿ ತೆರೆದಿಟ್ಟರು.

ಸಂದರ್ಶನದಲ್ಲಿ ಸಿರಾಜ್ ಹೇಳಿದ್ದೇನು?

ನಾನು ಏಳನೇ ವಯಸ್ಸಿನಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಆಡುವ ಮುಖಾಂತರ ಕ್ರೀಡಾರಂಗಕ್ಕೆ ಪಾದಾರ್ಪಣೆ ಮಾಡಿದೆ.ಇದಾದ ಬಳಿಕ ಪ್ರಮುಖ ಕ್ರಿಕೆಟ್ ಟೂರ್ನಮೆಂಟ್ ಗಳಲ್ಲಿ ಭಾಗವಹಿಸಿದೆ.ಒಳ್ಳೆ ವಿಕೆಟ್ ಕೂಡ ಸಿಕ್ಕಿತು.ಅಂಡರ್ 23 ಕ್ರಿಕೆಟ್ ಕೂಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡಿದೆ.ಇದಾದ ಬಳಿಕ ರಣಜಿ ಮ್ಯಾಚ್ ಗೆ ಆಯ್ಕೆಯಾದೆ.ಪ್ರಥಮ ಮ್ಯಾಚ್ ನಲ್ಲಿ ಒಂದು ವಿಕೆಟ್ ಗಳಿಸಿಕೊಂಡೆ.ಇದಾದ ಬಳಿಕ ಪಿಯುಸಿ ಮುಗಿಯಿತು.ಈ ವೇಳೆ ಐಪಿಎಲ್ ಶುರು ಆಯಿತು.ಹೈದರಾಬಾದ್ ನಲ್ಲಿ ಆರ್.ಸಿ.ಬಿ ವರ್ಸಸ್ ಸನ್ ರೈಸರ್ಸ್ ಮ್ಯಾಚ್ ಇತ್ತು ನಾನು ಆರ್.ಸಿ.ಬಿ ತಂಡಕ್ಕೆ ನೆಟ್ ಬೌಲರ್ ಆಗಿ ಆಯ್ಕೆ ಆದೆ.ಹೀಗೆ ಕ್ರಿಕೆಟ್ ಜರ್ನಿ ಕುರಿತಂತೆ ಮಾತನಾಡುತ್ತಾ ಹೋದರು.

ಈ ವೇಳೆ ಆರ್ ಸಿ ಬಿ ತಂಡದ ಕೋಚ್ ಭರತ್ ಅರುಣ್ ಸರ್ ಆಗಿದ್ದರು.ನನ್ನ ಶ್ರೇಷ್ಟ ಆಟ ನೋಡಿ ನಿನ್ನ ಹೆಸರೇನು ಎಂದು ಕೇಳಿದ್ರು.ನಾನು ಮಹಮ್ಮದ್ ಸಿರಾಜ್ ಎಂದು ಹೇಳಿದೆ.ನಾನು ನಿನ್ನ ಬಗ್ಗೆ ಲಕ್ಷ್ಮಣ್ ಸರ್( ಮಾಜಿ ಕ್ರಿಕೆಟಿಗ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡದ ಸಲಹೆಗಾರರು ) ಜತೆ ಮಾತನಾಡುತ್ತೇನೆ ಅಂದರು.ಆದರೆ ಲಕ್ಷ್ಮಣ್ ಸರ್ ಅವರಿಗೆ ನನ್ನ ಬಗ್ಗೆ ತಿಳಿದಿರಲಿಲ್ಲ. ಮಾರನೇ ವರ್ಷ ಹೈದರಾಬಾದ್ ರಣಜಿ ಟೀಂಗೆ ಭರತ್ ಸರ್ ಅವರೇ ಕೋಚ್ ಆಗಿದ್ದರು.ಅವರು ಬಂದಿದ್ದು ನನ್ನ ಅದೃಷ್ಟ.ಆ ವರ್ಷ 43 ವಿಕೆಟ್ ಬಂತು.ಸರ್ ಕ್ರೀಡಾಪಟುಗಳಿಗೆ ಆತ್ಮವಿಶ್ವಾಸ ತುಂಬುತ್ತಿದ್ದರು.ಉತ್ತಮ ಮಾರ್ಗದರ್ಶನ ನೀಡುತ್ತಿದ್ದರು.ನಿನಗೆ ಎಷ್ಟೊಂದು ಒಳ್ಳೆಯ ಪ್ರತಿಭೆ ಇದೆ ಎಂದು ಹುರಿದುಂಬಿಸುತ್ತಿದ್ದರು.ಈ ವೇಳೆ ನಾನು ಐಪಿಎಲ್ ಗೆ ಸೆಲೆಕ್ಟ್ ಆದೆ.ಅದೊಂದು ಸುಂದರ ಕ್ಷಣ.ನನ್ನ ಹೆಸರು ಟಿವಿಯಲ್ಲಿ ಬರುತ್ತಿತ್ತು.ನನಗಾಗಿ ಸನ್ ರೈಸರ್ಸ್ ಮತ್ತು ಆರ್ ಸಿ ಬಿ ತಂಡಗಳ ನಡುವೆ ಪೈಪೋಟಿ ಶುರುವಾಯಿತು.2.6 ಕೋಟಿಗೆ ಹರಾಜು ಆಯಿತು.