ಎಲ್ಲರಂತಲ್ಲ ಕ್ರಿಕೆಟಿಗ ಚಹಲ್..

ಟೀಂ ಇಂಡಿಯಾ ಕ್ರಿಕೆಟ್ ಕಂಡ ಅದ್ಭುತ ಬೌಲರ್, ಏಕದಿನ,ಐಪಿಎಲ್ ಪಂದ್ಯದಲ್ಲಿಯೂ ಬಹುಬೇಡಿಕೆಯ ಕ್ರೀಡಾ ತಾರೆ,ಬೌಲಿಂಗ್‍ನಲ್ಲೇ ಜಾದೂ ಮಾಡಿ ಪ್ರೇಕ್ಷಕರನ್ನೇ ಮಂತ್ರ ಮುಗ್ಧರನ್ನಾಗಿಸುವ ಕ್ರಿಕೆಟಿಗ…ಹೌದು ಇವರೇ ಟೀಂ ಇಂಡಿಯಾದ ಪ್ರಖ್ಯಾತ ಬೌಲರ್ ಯಜುವೇಂದ್ರ ಚಹಲ್ ಸಿಂಗ್..ಕಿರಿ ವಯಸ್ಸಿನಲ್ಲೇ ಅತಿ ಹೆಚ್ಚು ಸಾಧನೆ ಮಾಡಿ ದೇಶ-ವಿದೇಶದಲ್ಲಿ ಗುರುತಿಸಿ ಕೊಂಡ ಹೆಗ್ಗಳಿಕೆ ಇವರದ್ದು.ಇವರು ನಡೆದು ಬಂದ ಹಾದಿಯೇ ಬಲು ರೋಚಕ.ಗಲ್ಲಿ ಕ್ರಿಕೆಟ್ ಆಡುತ್ತಿದ್ದ ಹುಡುಗನ ರಾಷ್ಟ್ರೀಯ ಮಟ್ಟದವರೆಗಿನ ಕ್ರಿಕೆಟ್ ಪಯಣದ ಕುರಿತಂತೆ ಅನುಭವವನ್ನು ಹಂಚಿಕೊಂಡಿದ್ದಾರೆ.ಅವರು ಇತ್ತೀಚೆಗೆ ಬಿಡುಗಡೆಗೊಂಡಿರುವ ವೆಬ್ ಚಾನೆಲ್‍ನ ಕಾರ್ಯಕ್ರಮ `ದಿ ರೀನಾ ಡಿಸೋಜ ಶೋ’ ದಲ್ಲಿ
ತಮ್ಮ ವಿಚಾರಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.ಗೆಳೆಯರ ಜತೆಗಿನ ಹಾಸ್ಯ ಸನ್ನಿವೇಶಗಳ ಬಗ್ಗೆ ,ಅನುಭವಗಳ ಕುರಿತು ಹೇಳಿಕೊಂಡಿದ್ದಾರೆ. ಅಲ್ಲದೇ ಈ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ವಿವಿಧ ಬಗೆಯ ಕ್ರೀಡಾ ಚಟುವಟಿಕೆಯಲ್ಲಿ ಅವರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ತಂದರು.

ದಿ ರೀನಾ ಡಿಸೋಜ ಶೋ :

ಖ್ಯಾತ ಕ್ರೀಡಾ ನಿರೂಪಕಿ ರೀನಾ ಡಿಸೋಜ ಅವರ ಕನಸಿನ ಕಾರ್ಯಕ್ರಮ ಡಿ.7ರಂದು ಬಿಡುಗಡೆಗೊಂಡಿತು.ಕ್ರೀಡಾ ತಾರೆಗಳ ಆಸಕ್ತಿದಾಯಕ ಹಾಗೂ ಸಾಧಾನಾಗಾಥೆ ಕಥೆಗಳನ್ನು ಹೊರಚೆಲ್ಲುವ ಮೂಲಕ ಯುವ ಕ್ರೀಡಾಸಕ್ತರನ್ನು ಪ್ರೋತ್ಸಾಹಿಸಲು ಮುಕ್ತ ವೇದಿಕೆ ಇದಾಗಿದೆ.ಕ್ರೀಡಾ ದಿಗ್ಗಜರ ತಮ್ಮ ಕ್ರೀಡಾರಂಗದ ಮಾಹಿತಿ ಹಾಗೂ ವೈಯಕ್ತಿಕ ವಿಚಾರ,ಕೌಟುಂಬಿಕ ವಿಚಾರಗಳ ಕುರಿತಂತೆ ಕ್ರೀಡಾಭಿಮಾನಿಗಳ ಮುಂದೆ ತೆರೆದಿಡಲಾಗಿದೆ.ಅಂತೆಯೇ ಯಜುವೇಂದ್ರ ಚಹಲ್ ಸಿಂಗ್ ಅವರೂ ಕೂಡ ಈ ಕಾರ್ಯಕ್ರಮದ ಮೂಲಕ ತಮ್ಮ ಪ್ರಥಮ ವಿಕೆಟ್ ಹಾಗೂ ಕ್ರಿಕೆಟ್ ಹಾದಿಯ ಏಳು-ಬೀಳುಗಳು,ನೋವು-ನಲಿವುಗಳ ಸತ್ಯಾಂಶವನ್ನು ಹೇಳಿ ಕೊಂಡಿದ್ದಾರೆ.ಈಗಾಗ್ಲೇ ಯೂ ಟ್ಯೂಬ್‍ನಲ್ಲಿ ಸಂಚಲನವುಂಟು ಮಾಡಿದ ಕಾರ್ಯಕ್ರಮಕ್ಕೆ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ.ಕೊಟ್ಯಂತರ ಕ್ರೀಡಾಸಕ್ತರ ಮನಗೆದ್ದಿರುವ ಕ್ರಿಕೆಟಿಗ ಯಜುವೇಂದ್ರ ಅವರನ್ನು ನಿರೂಪಕಿ ರೀನಾ ಅವರು ನೇರ ಪ್ರಶ್ನೆಗಳನ್ನು ಕೇಳುವುದರ ಮೂಲಕ ಕಾರ್ಯಕ್ರಮಕ್ಕೆ ಶೋಭೆ ತಂದರು.ಹಾಸ್ಯ ಸನ್ನಿವೇಶದ ಪ್ರಶ್ನೆಯಲ್ಲಿ ಆರಂಭಗೊಂಡ ಕಾರ್ಯಕ್ರಮ,ಗಂಭೀರ ವಿಚಾರದೊಂದಿಗೆಯೂ ಮುಂದುವರಿದಿದೆ.ಕಾರ್ಯಕ್ರಮದ ಆರಂಭದಲ್ಲಿ ಆರು-ಏಳು ವರ್ಷಗಳ ಹಿಂದಿನ ಹಾಸ್ಯ ಘಟನೆಯೊಂದನ್ನು ನೆನಪಿಸುತ್ತಾ , ಗೆಳೆಯನ ಜತೆಗಿನ ಗೋವಾ ಹಾಗೂ 120 ಕಿಲೋ ಮೀಟರ್ ಸ್ಕೂಟಿ ಪ್ರಯಾಣದ ಕುರಿತು ವಿವರಿಸಿದರು.

ಹೀಗೆ ಯಜುವೇಂದ್ರ ಅವರು ಐಪಿಎಲ್ ಪಂದ್ಯ ಬಗ್ಗೆಯೂ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.ಮೊದಲ ಬಾರಿಗೆ ಅವರಿಗೆ ಸಿಕ್ಕಿರುವ ಅವಕಾಶ ಹಾಗೂ ಅನುಭವದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರು.”2011ರ ಐಪಿಎಲ್ ಪಂದ್ಯದಲ್ಲಿ ನನ್ನ ಸುಂದರ ಕ್ಷಣವನ್ನು ಕಂಡುಕೊಂಡಿದ್ದೇನೆ.ಅದಂತು ಐಪಿಎಲ್ ಪಂದ್ಯದ ಮೊದಲನೇ ವರ್ಷ ಕೂಡ ಆಗಿತ್ತು.ನನಗಿಂತ ಅನುಭವಸ್ಥ ಸ್ಪಿನ್ನರ್‍ಗಳು ಟೀಂನಲ್ಲಿ ಇದ್ದುದರಿಂದ ನನಗೆ ಅಷ್ಟೊಂದು ಮಹತ್ವವಿರಲಿಲ್ಲ.ಆದರೂ ಮುಂದೆ ಬರುವ ಅವಕಾಶದಲ್ಲಿ ನಾನು ಉತ್ತಮ ಪ್ರದರ್ಶನ ನೀಡುತ್ತೆನೆಂದು,ಇಲ್ಲಿ ಸಣ್ಣ ಪಾತ್ರವಾದರೂ ಸಿಕ್ಕ ಅವಕಾಶ ಸದುಪಯೋಗಿಸಿಕೊಂಡೆ. ಕೊನೆ ಪಕ್ಷ ನಾನು ಇಲ್ಲಿಯವರೆಗಾದ್ರೂ ಬಂದಿದ್ದಿನಲ್ಲ ಎಂದು ನನ್ನ ಮೇಲಿರುವ ನಂಬಿಕೆ ಕಳೆದು ಕೊಳ್ಳಲಿಲ್ಲ. ಆಟ ಮುಂದುವರಿಸಿದೆ.ಆಡುತ್ತಾ ಆಡುತ್ತಾ ನನ್ನ ಆತ್ಮ ವಿಶ್ವಾಸ ಬೆಳೆಯಿತು. ಜತೆಗೆ ರೋಹಿತ್ ನನಗೆ ತುಂಬಾ ಬೆಂಬಲ ನೀಡುತ್ತಿದ್ದರು.2014ರಲ್ಲಿ ನನ್ನ ಜೀವನದ ತಿರುವು ಬದಲಾಯಿತು.ಇನ್ನು ಹೆಚ್ಚಿನ ಪ್ರದರ್ಶನ ನೀಡಿದೆ.ಇದರಿಂದಾಗಿ ಮುಂದೆ ಐದು-ಆರು ಪಂದ್ಯಗಳಲ್ಲಿ ಆಡುತ್ತಾ ಇನ್ನು ಮುಂದೆ ಯಾವುದೇ ಭಯವಿಲ್ಲದೇ ಆಡಬಹುದು ಎನ್ನುವ ಧೈರ್ಯ ನನ್ನನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿತು”ಎಂದು ಯುಜಿ ಕಾರ್ಯಕ್ರಮದಲ್ಲಿ ಹೇಳಿ ಕೊಂಡರು.ಎಬಿಡಿ ಹಾಗೂ ಧೋನಿ ಜತೆಗೆ ಆಡಿದ ಆ ನೆನಪನ್ನು ಕೂಡ ಇಲ್ಲಿ ಸ್ಮರಿಸಿಕೊಂಡರು.ಹಾಗೂ ಕಾರ್ಯಕ್ರಮದಲ್ಲಿ ಅವರ ಸೀಕ್ರೆಟ್ ಟ್ಯಾಟೂ ಬಗ್ಗೆ ಪ್ರಸ್ತಾಪಿಸಲಾಯಿತು.ಈ ಬಗ್ಗೆ ಯುಜಿ ನಗೆ ಬೀರುತ್ತಾ ಉತ್ತರಿಸಿದರು.ಇದೇ ಸಂದರ್ಭ ಅವರ ಪ್ರಥಮ ವಿಕೆಟ್ ಕುರಿತು ಆ ಸಂತೋಷದ ಕ್ಷಣವನ್ನು ನೆನಪಿಸಿಕೊಂಡರು.ನಾನು ಇಷ್ಟೊಂದು ಸಾಧಿಸಲು ನನ್ನ ತಂದೆ ತಾಯಿ ಪಾತ್ರ ತುಂಬಾನೇ ಇದೆ.ಅವರ ಪರಿಶ್ರಮ,ಜೀವನದಲ್ಲಿ ಅವರು ನನಗಾಗಿ ಹೋರಾಡಿದ ಕ್ಷಣಗಳು ಅವಿಸ್ಮರಣೀಯ.ನಾನು ಟಿವಿಯಲ್ಲಿ ಕಂಡಾಗಲೆಲ್ಲ ಅವರು ಭಾವುಕರಾಗುತ್ತಿದ್ದರು.ಆದರೆ `ಸಾಧನೆ’ ಎಂದಾಗ ನಾವು ಅವರಿಂದ ದೂರ ಇರುವುದು ಅನಿವಾರ್ಯ ಆಗಿದೆ ಎಂದು ಭಾವುಕರಾದರು.

ಗೇಮಿಂಗ್ ಸೆಗ್‍ಮೆಂಟ್ :

ಗ್ರೇ ನಿಕ್ಲ್ಸ್ ಪ್ರಾಯೋಜಕತ್ವದಲ್ಲಿ ಮೂಡಿ ಬಂದ ಗೇಮಿಂಗ್ ಸೆಗ್‍ಮೆಂಟ್‍ನಲ್ಲಿ ಯುಜಿ ಉತ್ಸಾಹದಲ್ಲಿ ಪಾಲ್ಗೊಂಡರು.ಮೂರು ವಿಧದ ಕ್ರೀಡಾ ಚಟುವಟಿಕೆಯಲ್ಲಿ ಸೀಮಿತ ಅವಧಿ ತೆಗೆದುಕೊಂಡು ಆಟ ಆಡಿ ಗಮನ ಸೆಳೆದರು.ನೆಚ್ಚಿನ ನಂಬರ್ ಮೂರನ್ನು ಆಯ್ಕೆ ಮಾಡುತ್ತಾ ಆಸಕ್ತಿಯಿಂದಲೇ ಆಟ ಮುಂದುವರಿಸಿದರು.ಮೊದಲ ಗೇಮ್‍ನಲ್ಲಿ ಮೂರು ಅವಕಾಶಗಳನ್ನು ಪಡೆದರೂ ಅವರ ಅವಕಾಶ ಕೈ ತಪ್ಪಿ ಹೋಯಿತು.ಇದಕ್ಕಾಗಿ ಅವರಿಗೆ ಸಣ್ಣ ಶಿಕ್ಷೆ ಎದುರಿಸಬೇಕಾಗಿ ಬಂತು.ಅದುವೇ ಜ್ಯೂಸ್ ಕುಡಿಯೋ ಕಾರ್ಯಕ್ರಮ.ಕಾರ್ಯಕ್ರಮದ ನಿಯಮದಂತೆ ಯಜ್ವೇಂದ್ರ ಜ್ಯೂಸ್ ಕುಡಿದರು.ಎರಡನೇ ಹಂತದ ಗೇಮಿಂಗ್ ಶೋ ಇನ್ನೂ ಮಜಾವಾಗಿತ್ತು.ಇಲ್ಲಿ ಯಜುವೇಂದ್ರ ಚಹಲ್ ತುಂಬಾ ಜಾಗರೂಕತೆಯಿಂದ ಆಡಿ ಜಯ ಸಾಧಿಸಿದರು.ಈ ಬಾರಿ ಐದು ಅವಕಾಶವಿದ್ದರೂ ಕೇವಲ ಒಂದೇ ಅವಕಾಶ ಬಳಸಿಕೊಂಡು ಗಮನ ಸೆಳೆದರು.ಲೆಗ್ಸ್ ಸ್ಪಿನ್ನರ್ ಆಗಿರುವ ಚಹಲ್ ಅವರಿಗೆ ಗಾಲ್ಫ್ ಆಡುವ ಸರದಿ .ಈ ಗೇಮ್‍ನಲ್ಲೂ ಮೊದಲ ಅವಕಾಶದಲ್ಲೇ ವಿನ್ ಆದರು.ಇನ್ನು ಮೂರನೇ ಗೇಮಿಂಗ್‍ನಲ್ಲೂ ಕಪ್ ಬೀಳಿಸುವ ಮೂಲಕ ಗೆಲುವು ಸಾಧಿಸಿದರು.ಹೀಗೆ ಗ್ರೇ ನಿಕ್ಲ್ಸ್ ಪ್ರಾಯೋಜಕತ್ವದ ಗೇಮಿಂಗ್ ಅಲ್ಲಿಗೆ ಕೊನೆಗೊಂಡಿತು.ನಂತರ ಯುಜಿ ಅವರ ಆಟೋಗ್ರಾಫ್ ಪಡೆದುಕೊಳ್ಳಲಾಯಿತು.

ಎಜುಕೇಟಿವ್ ಸೆಗ್‍ಮೆಂಟ್ :

ರೇಡಿಯೋ ಪಾಲುದಾರರಾದ ರೇಡಿಯೋ ಸಿಟಿ ಪ್ರಾಯೋಜಕತ್ವದಲ್ಲಿ ಮೂಡಿ ಬಂದ ಸೆಗ್‍ಮೆಂಟ್ ಇದು.ಇಲ್ಲಿ ಯುವ ಜನಾಂಗಕ್ಕೆ ಕ್ರೀಡಾಗಾರರಾಗಲು ಸಲಹೆ ಕೊಟ್ಟರು.ಯುವ ಜನತೆಗೆ ಅತ್ಯುತ್ತಮ ಮಾರ್ಗದರ್ಶನ ನೀಡುವ ಮೂಲಕ ಯುಜಿ ಯುವ ಜನತೆಯನ್ನು ಹುರಿದುಂಬಿಸುವ ಮಾತುಗಳನ್ನಾಡಿದರು.ಜೀವನದಲ್ಲಿ ಗುರಿ ಇಟ್ಟು ಮುಂದುವರಿಯಿರಿ ಎಂಬ ಸಲಹೆ ನೀಡಿದರು.ಇಲ್ಲಿ ಯುಜಿಯವರಿಗಿರುವ ಚೆಸ್ ಆಟದ ಆಸಕ್ತಿ ಹಾಗೂ ಚೆಸ್‍ನಲ್ಲಿ ಮುಂದುವರಿಯ ಬೇಕೆನ್ನುವ ಅವರಪ್ಪನ ಕನಸು ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.ಹಾಗೆಯೇ ಕ್ರಿಕೆಟ್ ,ಗಾಲ್ಫ್ ಕುರಿತಂತೆಯೂ ಮಾಹಿತಿ ನೀಡಿದರು.ಇದನ್ನು ಹೊರತು ಪಡಿಸಿಯೂ ಯುಜಿ ಮ್ಯೂಸಿಕ್‍ನ್ನು ಕೂಡ ಇಷ್ಟ ಪಡುತ್ತಾರಂತೆ ಈ ಬಗ್ಗೆಯೂ ಅವರು ಅಭಿಪ್ರಾಯ ಹಂಚಿಕೊಂಡರು.ಅಂತೆಯೇ ಯುಜಿ ಜೀವನದಲ್ಲಿ `ಹರ್ಯಾಣ ರಾಜ್ಯ ಕ್ರಿಕೆಟ್ ಅಸೋಸಿಯೇಶನ್’ ಕೊಡುಗೆ ಮಹತ್ತರವಾದುದು,ಈ ಕುರಿತು ಯುಜಿ ಅಸೋಸಿಯೇಶನ್‍ನ್ನು ಕೊಂಡಾಡಿದರು.ಇನ್ನು ಯುಜಿ ಮದುವೆ ವಿಚಾರವನ್ನೂ ಪ್ರಸ್ತಾಪಿಸಲಾಯಿತು.ತಾನಿಷ್ಕ ಕಪೂರ್ ಅವರೊಂದಿಗಿನ ಗಾಸಿಪ್ ಕುರಿತು ಕೇಳಿದ ಪ್ರಶ್ನೆಗೆ ನೇರವಾಗಿ ಉತ್ತರಿಸಿದ ಯುಜಿ `ಇಲ್ಲ ಅವರು ನನ್ನ ಬೆಸ್ಟ್ ಫ್ರೆಂಡ್ ,ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಗಾಸಿಪ್‍ನಲ್ಲಿ ಸತ್ಯಾಂಶವಿಲ್ಲ ‘ಎಂದಿದ್ದಾರೆ.

ಫುಡ್ ಟೇಸ್ಟಿಂಗ್ ಸೆಗ್‍ಮೆಂಟ್

ರಾಜ್ಮ ರೈಸ್ ಅನ್ನು ಬಲು ಇಷ್ಟ ಪಡುವ ಯುಜಿ ಅವರಿಗೆ ಕೆಲವು ಫೂಡ್ ಐಟಂನ್ನು ಸವಿಯುವ ಅವಕಾಶ.ಕೋರಮಂಗಲದ ಫಂಡಮ್ ಎಟ್ ಗಿಲ್ಲಿಸ್ ರಿಡಿಫೈಂಡ್ ಪ್ರಾಯೋಜಕತ್ವದಲ್ಲಿನ ಗಿಲ್ಲಿಸ್ ಕೋಲಾ ಚಿಕನ್ ಮತ್ತು ಗುಂಟೂರ್ ಚಿಕನ್ ಟಿಕ್ಕವನ್ನು ಯುಜಿ ಸವಿಯುಂಡರು.ಕಾರ್ಯಕ್ರಮದಲ್ಲಿ ನಿರೂಪಕಿ ರೀನಾ ಅವರು ಯುಜಿಗೆ
ಕೆಲ ಕನ್ನಡ ಶಬ್ಧಗಳನ್ನು ಕಲಿಸಿಕೊಟ್ಟರು.`ಕರ್ನಾಟಕದ ಎಲ್ಲಾ ಕನ್ನಡಿಗರಿಗೂ ನಮಸ್ಕಾರ ನಮಸ್ಕಾರ ನಮಸ್ಕಾರ’ ಎಂಬ ವಾಕ್ಯ ಉಚ್ಚರಿಸಲು ತೊದಲಿದರೂ ಅದನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾದರು ಯುಜಿ.

ರ್ಯಾಪಿಡ್ ಫಾಯರ್

ಇಲ್ಲಿ ಯುಜಿ ಅವರಿಗೆ ಕೆಲ ಪ್ರಶ್ನೆಗಳು ಕಾದಿದ್ದವು.ಅವುಗಳಿಗೆ ಫಟಾ ಫಟ್ ಉತ್ತರಿಸುವುದರ ಮೂಲಕ ಅವರು ಜಾಣತನ ಮೆರೆದರು.ಕೊನೆಯಲ್ಲಿ ಯುಜಿ ಪ್ರಾಣಿ ಪ್ರೀತಿ ಬಗ್ಗೆ
ಜನರಿಗೆ ತಿಳಿ ಹೇಳಿದರು ಹಾಗೂ ಪ್ರಾಣಿಗಳನ್ನು ರಕ್ಷಿಸಿ ಎಂದು ಮನವಿ ಮಾಡಿದರು.ಈ ಮೂಲಕ ತಿಳಿಯುತ್ತೆ ಯುಜಿಯವರಿಗೆ ಪ್ರಾಣಿಗಳ ಮೇಲೆ ಎಷ್ಟೊಂದು ಪ್ರೀತಿ ಇದೆ ಎಂದು.ಅವುಗಳು ಮುಗ್ಧ ಜೀವಿಗಳು ಅವುಗಳನ್ನು ಕೊಲ್ಲುವುದು ಸರಿಯಲ್ಲ.ಅವುಗಳನ್ನೂ ಬದುಕಲು ಬಿಡಿ ಎಂದು ಈ ಕಾರ್ಯಕ್ರಮದ ಮೂಲಕ ಸಂದೇಶ ಸಾರಿದರು ಯುಜಿ.ಕಾರ್ಯಕ್ರಮದಲ್ಲಿ ಯುಜಿ ಅವರಿಗೆ ಗಿಫ್ಟ್ ಹ್ಯಾಂಪರ್ ನೀಡಲಾಯಿತು.

ಒಟ್ಟಿನಲ್ಲಿ ಯಜುವೇಂದ್ರ ಅವರ ಸಾಧನಾಗಾಥೆ ಕುರಿತ ಕಾರ್ಯಕ್ರಮ ಯುವ ಜನತೆಗೆ ಸ್ಪೂರ್ತಿದಾಯಕವಾಗಿದೆ. ಇವರು ಇಂಡಿಯಾ ಕ್ರಿಕೆಟ್ ಟೀಂನಲ್ಲಿ ಗುರುತಿಸಿಕೊಂಡು ದೇಶಕ್ಕೆ ಮಾದರಿಯೆನಿಸಿದ್ದಾರೆ.ಇವರ ಸರಳ ನಡೆ ನುಡಿ ಹಾಗೂ ಸಾಧನೆಗೆ ನಮ್ಮದೊಂದು ಸಲಾಂ..

ದಯಾಮಣಿ.ಕೆ